ADVERTISEMENT

ಅರುಣಾಚಲದ ಪಶ್ಚಿಮ ಕಾಮೆಂಗ್ ಜಿಲ್ಲೆಯಲ್ಲಿ ಭೂಕಂಪ: ಯಾವುದೇ ಅನಾಹುತ ಸಂಭವಿಸಿಲ್ಲ

ಪಿಟಿಐ
Published 4 ಫೆಬ್ರುವರಿ 2026, 7:37 IST
Last Updated 4 ಫೆಬ್ರುವರಿ 2026, 7:37 IST
<div class="paragraphs"><p>ಭೂಕಂಪ</p></div>

ಭೂಕಂಪ

   

ಇಟಾನಗರ: ಅರುಣಾಚಲ ಪ್ರದೇಶದ ಪಶ್ಚಿಮ ಕಾಮೆಂಗ್ ಜಿಲ್ಲೆಯಲ್ಲಿ ಬುಧವಾರ ಭೂಕಂಪವಾಗಿದ್ದು ತಕ್ಷಣಕ್ಕೆ ಯಾವುದೇ ಅನಾಹುತಗಳು ಸಂಭವಿಸಿದ ವರದಿಯಾಗಿಲ್ಲ. 

ರಿಕ್ಟರ್‌ ಮಾಪಕದಲ್ಲಿ 4.1 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

ಬೆಳಿಗ್ಗೆ 8.57ಕ್ಕೆ ಭೂಕಂಪ ಸಂಭವಿಸಿದ್ದು, ಕಂಪನದ ಕೇಂದ್ರ ಬಿಂದು ಐದು ಕಿ.ಮೀಟರ್‌ ಭೂಮಿಯ ಆಳದಲ್ಲಿ ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್‌) ಮಾಹಿತಿ ನೀಡಿದೆ.

ಈವರೆಗೂ ಜೀವಹಾನಿ ಅಥವಾ ಆಸ್ತಿ–ಪಾಸ್ತಿ ನಷ್ಟದ ಕುರಿತು ಯಾವುದೇ ವರದಿ ಬಂದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.