ADVERTISEMENT

ಗುಜರಾತ್‌ನಲ್ಲಿ 4.3ರಷ್ಟು ತೀವ್ರತೆಯ ಭೂಕಂಪ

ಪಿಟಿಐ
Published 30 ಡಿಸೆಂಬರ್ 2020, 7:46 IST
Last Updated 30 ಡಿಸೆಂಬರ್ 2020, 7:46 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಭುಜ್‌: ಗುಜರಾತ್‌ನ ಕಚ್‌ ಜಿಲ್ಲೆಯಲ್ಲಿ ಬುಧವಾರ ಬೆಳಿಗ್ಗೆ ಭೂಕಂಪ ಉಂಟಾಗಿದ್ದು ರಿಕ್ಟರ್‌ ಮಾಪಕದಲ್ಲಿ ತೀವ್ರತೆಯ ಪ್ರಮಾಣ4.3ರಷ್ಟು ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ಬೆಳಿಗ್ಗೆ 9.45ಕ್ಕೆ ಭೂಕಂಪ ಸಂಭವಿಸಿದ್ದು, ಕಚ್‌ನ ಖಾವ್ಡಾ ಗ್ರಾಮದ ಬಳಿ 26 ಕಿ.ಮೀ ಆಳದಲ್ಲಿ ಭೂ ಕಂಪನದ ಕೇಂದ್ರ ಬಿಂದು ಪತ್ತೆಯಾಗಿದೆ ಎಂದು ಗಾಂಧಿ ನಗರ ಮೂಲದ ಭೂಕಂಪನ ಸಂಶೋಧನೆ ಸಂಸ್ಥೆಯು ಹೇಳಿಕೆಯಲ್ಲಿ ತಿಳಿಸಿದೆ.

‘ಇದಕ್ಕೂ ಮುನ್ನ ಕಚ್‌ನ ಬಚಾವ್‌ ಪಟ್ಟಣದ ಬಳಿಯೂ 2.2ರಷ್ಟು ತೀವ್ರತೆಯಲ್ಲಿ ಭೂಮಿ ಕಂಪಿಸಿದೆ’ ಎಂದು ಸಂಸ್ಥೆ ಹೇಳಿದೆ.

ADVERTISEMENT

‘ಮರುಭೂಮಿ ಪ್ರದೇಶದಲ್ಲಿ ಭೂಮಿ ಕಂಪಿಸಿದೆ. ಅಲ್ಲಿ ಜನ ಸಂಖ್ಯೆ ಕೂಡ ಬಹಳ ವಿರಳವಾಗಿದೆ. ಅಲ್ಲದೆ ಭೂಕಂಪನದ ತೀವ್ರತೆ ಕಡಿಮೆ ಇದ್ದರಿಂದ ಯಾವುದೇ ಪ್ರಾಣ ಹಾನಿ ಅಥವಾ ಆಸ್ತಿ ಹಾನಿ ಸಂಭವಿಸಿಲ್ಲ’ ಎಂದು ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.