ನವದೆಹಲಿ: ಚೀನಾದ ಈಸ್ಟರ್ನ್ ಏರ್‌ಲೈನ್ಸ್ ನ.9ರಿಂದ ಶಾಂಘೈ ಮತ್ತು ದೆಹಲಿ ನಡುವೆ ನೇರ ವಿಮಾನಯಾನವನ್ನು ಪುನರಾರಂಭಿಸಲಿದೆ.
ಬುಧವಾರ, ಶನಿವಾರ ಮತ್ತು ಭಾನುವಾರ ಏರ್‌ಬಸ್ ಎ330–200 ವಿಮಾನವು ಹಾರಾಟ ನಡೆಸಲಿದೆ.
‘ಈ ಸೇವೆಯ ಪುನರಾರಂಭವು ಭಾರತದಲ್ಲಿ ಈಸ್ಟರ್ನ್ ಏರ್‌ಲೈನ್ಸ್ ಜಾಲದ ಪುನರ್‌ಸ್ಥಾಪನೆಯನ್ನು ಸೂಚಿಸುತ್ತದೆ. ಇದು ಜನರ ನಡುವೆ ವಸ್ತುಗಳ ವಿನಿಮಯ, ಆರ್ಥಿಕ ಮತ್ತು ವ್ಯಾಪಾರದ ಸಹಯೋಗಕ್ಕೆ ಹೊಸ ವೇಗವನ್ನು ನೀಡುತ್ತದೆ’ ಎಂದು ಈಸ್ಟರ್ನ್ ಏರ್‌ಲೈನ್ಸ್ ಗುರುವಾರ ಪ್ರಕಟಣೆಯಲ್ಲಿ ತಿಳಿಸಿದೆ.
ಐದು ವರ್ಷಗಳಿಗೂ ಹೆಚ್ಚು ಕಾಲದ ನಂತರ ಅ.26ರಂದು ಭಾರತ ಮತ್ತು ಚೀನಾ ನಡುವಿನ ನೇರ ವಿಮಾನ ಸೇವೆಗಳು ಪುನರಾರಂಭಗೊಳ್ಳಲಿವೆ. ಇಂಡಿಗೊ ಸಂಸ್ಥೆಯು ಕೋಲ್ಕತ್ತ ಮತ್ತು ಗುವಾಂಗ್‌ಝೌ ನಗರದ ನಡುವೆ ವಿಮಾನಗಳ ಹಾರಾಟವನ್ನು ಆರಂಭಿಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.