ಕಂಪಾಲಾ: ‘ಉಗಾಂಡದಲ್ಲಿ ಎಬೋಲಾ ವೈರಾಣು ಸೋಂಕು 9 ಮಂದಿಯಲ್ಲಿ ಪತ್ತೆಯಾಗಿದ್ದು, 256 ಮಂದಿಯನ್ನು ಕ್ವಾರಂಟೈನ್‌ನಲ್ಲಿ ಇಡಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ಜ.30ರಂದು ನರ್ಸ್‌ವೊಬ್ಬರಿಗೆ ಸೋಂಕು ತಗುಲಿ ಮೃತಪಟ್ಟಿದ್ದರು. ಉಳಿದ 8 ಮಂದಿಗೆ ಚಿಕಿತ್ಸೆ ಒದಗಿಸಲಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದೆ’ ಎಂದು ಆರೋಗ್ಯ ಸಚಿವಾಲಯವು ತಿಳಿಸಿದೆ.
‘ಕಂಪಾಲಾದ ಮುಖ್ಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಏಳು ಮಂದಿಗೆ ಚಿಕಿತ್ಸೆ ಕಲ್ಪಿಸಲಾಗುತ್ತಿದ್ದು, ಉಳಿದವರಿಗೆ ಪೂರ್ವ ಜಿಲ್ಲೆಯ ಎಂಬಾಲೆಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಪರಿಸ್ಥಿತಿ ನಿಯಂತ್ರಣದಲ್ಲಿದೆ’ ಎಂದು ಇಲಾಖೆ ತಿಳಿಸಿದೆ.
2000ನೇ ಇಸವಿಯಲ್ಲಿ ಉಗಾಂಡದಲ್ಲಿ ಎಬೋಲಾ ಸೋಂಕಿನಿಂದಾಗಿ 200 ಜನರು ಅಸುನೀಗಿದ್ದರು. 2014–16ರಲ್ಲಿ ಪಶ್ಚಿಮ ಆಫ್ರಿಕಾದಲ್ಲಿ ಈ ಸೋಂಕಿಗೆ 11 ಸಾವಿರ ಜನರು ಮೃತಪಟ್ಟಿದ್ದರು.
1976ರಲ್ಲಿ ದಕ್ಷಿಣ ಸುಡಾನ್ ಮತ್ತು ಕಾಂಗೊದಲ್ಲಿ ಎರಡು ಎಬೋಲಾ ಸೋಂಕು ಪತ್ತೆಯಾಯಿತು. ಎಬೋಲಾ ನದಿಯ ಸಮೀಪದ ಹಳ್ಳಿಯಲ್ಲಿ ಇದು ಪತ್ತೆಯಾಗಿದ್ದರಿಂದ ಈ ಸೋಂಕಿಗೆ ಎಬೋಲಾ ಎಂದು ಹೆಸರಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.