ADVERTISEMENT

ಪಶ್ಚಿಮ ಬಂಗಾಳದಲ್ಲಿ ಮುಕ್ತ ಮತದಾನದ ಪರಿಸ್ಥಿತಿ ಖಾತ್ರಿಪಡಿಸಿ: ಆಯೋಗಕ್ಕೆ ಸಿಪಿಎಂ

ಕೇಂದ್ರ ಚುನಾವಣಾ ಆಯೋಗಕ್ಕೆ ಸಿಪಿಎಂ ಅಭ್ಯರ್ಥಿ ಆಗ್ರಹ

ಪಿಟಿಐ
Published 16 ಮಾರ್ಚ್ 2024, 15:57 IST
Last Updated 16 ಮಾರ್ಚ್ 2024, 15:57 IST
ಸುಜನ್‌ ಚಕ್ರವರ್ತಿ (ಮಧ್ಯದಲ್ಲಿರುವವರು) – ಪಿಟಿಐ ಚಿತ್ರ
ಸುಜನ್‌ ಚಕ್ರವರ್ತಿ (ಮಧ್ಯದಲ್ಲಿರುವವರು) – ಪಿಟಿಐ ಚಿತ್ರ   

ಕೋಲ್ಕತ್ತ: ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಮತದಾರರು ಯಾವ ಪ್ರಭಾವಕ್ಕೂ ಒಳಗಾಗದೆ ಮುಕ್ತವಾಗಿ ತಮ್ಮ ಮತ ಚಲಾಯಿಸುವ ವಾತಾವರಣವನ್ನು ಚುನಾವಣಾ ಆಯೋಗ ಖಾತ್ರಿಪಡಿಸಲಿ ಎಂದು ಸಿಪಿಎಂ ಶನಿವಾರ ಕೇಳಿದೆ. 

‘ಹಂತಗಳು ಮತ್ತು ಭದ್ರತಾ ಸಿಬ್ಬಂದಿಯ ಸಂಖ್ಯೆ ಮುಖ್ಯವಲ್ಲ; ಮುಕ್ತ ಮತ್ತು ನ್ಯಾಯಸಮ್ಮತವಾದ ಚುನಾವಣೆಯ ವಾತಾವರಣ ಮುಖ್ಯ ವಿಷಯವಾಗಿದೆ’ ಎಂದು ಸಿಪಿಎಂ ಪಕ್ಷದ ಕೇಂದ್ರ ಸಮಿತಿ ಸದಸ್ಯ ಸುಜನ್‌ ಚಕ್ರವರ್ತಿ ಹೇಳಿದ್ದಾರೆ.

2021ರ ವಿಧಾನಸಭೆ ಚುನಾವಣೆ ಮತ್ತು 2023ರ ಪಂಚಾಯಿತಿ ಚುನಾವಣೆಗಳ ವೇಳೆ ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ ಮತದಾರರನ್ನು ಬೆದರಿಸಿ, ಚುನಾವಣೆಗೆ ಸಂಬಂಧಿಸಿದಂತೆ ಹಿಂಸಾಚಾರ ನಡೆಸಿತ್ತು ಎಂದು ಎಡಪಕ್ಷ ಸೇರಿ ವಿಪಕ್ಷಗಳು ಆರೋಪ ಮಾಡಿದ್ದವು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.