ADVERTISEMENT

ನಟನ ಜತೆ ಫೋಟೊ ಪ್ರಚಾರಕ್ಕೆ ಬಳಕೆ: ಚುನಾವಣಾ ಆಯೋಗದ ಎಚ್ಚರಿಕೆ

ಪಿಟಿಐ
Published 23 ಮಾರ್ಚ್ 2024, 14:52 IST
Last Updated 23 ಮಾರ್ಚ್ 2024, 14:52 IST
..
..   

ತ್ರಿಶ್ಶೂರ್ (ಕೇರಳ): ಮಲೆಯಾಳ ನಟ ಟೊವಿನೊ ಥಾಮಸ್ ಜತೆಗಿನ ಫೋಟೊವನ್ನು ಚುನಾವಣಾ ಪ್ರಚಾರಕ್ಕಾಗಿ ಬಳಸಿದ ಕಾರಣಕ್ಕೆ ತ್ರಿಶ್ಶೂರ್ ಲೋಕಸಭಾ ಕ್ಷೇತ್ರದ ಸಿಪಿಐ ಅಭ್ಯರ್ಥಿ ವಿ.ಎಸ್‌.ಸುನಿಲ್ ಕುಮಾರ್ ಅವರಿಗೆ ಚುನಾವಣಾ ಆಯೋಗವು ಎಚ್ಚರಿಕೆ ನೀಡಿದೆ.

ಟೊವಿನೊ ಅವರು ಚುನಾವಣಾ ಆಯೋಗದ ‘ವ್ಯವಸ್ಥಿತ ಮತದಾರರ ಶಿಕ್ಷಣ ಮತ್ತು ಚುನಾವಣಾ ಭಾಗವಹಿಸುವಿಕೆ ಕಾರ್ಯಕ್ರಮ’ದ (ಎಸ್‌ವಿಇಇಪಿ) ರಾಯಭಾರಿಯಾಗಿದ್ದು, ಅವರೊಂದಿಗಿನ ಚಿತ್ರವನ್ನು ಸುನಿಲ್ ಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಬಳಸಿದ್ದರು. 

ಈ ಬಗ್ಗೆ ತ್ರಿಶ್ಶೂರಿನ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿಗೆ ಎನ್‌ಡಿಎ ದೂರು ನೀಡಿತ್ತು. ನಂತರ ಸುನಿಲ್ ಕುಮಾರ್ ಆ ಚಿತ್ರವನ್ನು ಸಾಮಾಜಿಕ ಜಾಲತಾಣದಿಂದ ತೆಗೆದುಹಾಕಿದ್ದರು. ಅಂಥ ಪ್ರಕರಣಗಳು ಮರುಕಳಿಸದಂತೆ ಚುನಾವಣಾ ಆಯೋಗವು ಅವರಿಗೆ ಎಚ್ಚರಿಕೆ ನೀಡಿದೆ. ತ್ರಿಶ್ಶೂರ್ ಲೋಕಸಭಾ ಕ್ಷೇತ್ರದಲ್ಲಿ ನಟ ಸುರೇಶ್ ಗೋಪಿ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.