ADVERTISEMENT

ಎಸ್‌ಐಆರ್‌| ಚು.ಆಯೋಗದ ನಿರ್ದೇಶನ ಪಾಲಿಸಿಲ್ಲ, ಬೀದಿಗಿಳಿದು ಹೋರಾಟ: ಸಂಜಯ್‌ ಯಾದವ್

ಪಿಟಿಐ
Published 2 ಆಗಸ್ಟ್ 2025, 14:39 IST
Last Updated 2 ಆಗಸ್ಟ್ 2025, 14:39 IST
<div class="paragraphs"><p>ಸಂಜಯ್‌ ಯಾದವ್</p></div>

ಸಂಜಯ್‌ ಯಾದವ್

   

ನವದೆಹಲಿ: ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯನ್ನು (ಎಸ್‌ಐಆರ್‌) ಪಾರದರ್ಶಕವಾಗಿ ನಡೆಸಿಲ್ಲ. ಚುನಾವಣಾ ಆಯೋಗದ ನಿರ್ದೇಶನಗಳನ್ನು ಪಾಲಿಸಿಲ್ಲ ಎಂದು ಆರ್‌ಜೆಡಿ ರಾಜ್ಯಸಭಾ ಸದಸ್ಯ ಸಂಜಯ್‌ ಯಾದವ್‌ ಆರೋಪಿಸಿದ್ದಾರೆ.

ಈ ವಿಷಯದ ವಿರುದ್ಧ ರಾಷ್ಟ್ರೀಯ ಜನತಾ ದಳ ಹಾಗೂ ಇತರೆ ವಿರೋಧ ಪಕ್ಷಗಳು ಬೀದಿಗಿಳಿದು ಹೋರಾಟ ನಡೆಸಲಿವೆ. ಇದಕ್ಕೆ ಜನರ ಬೆಂಬಲವೂ ಇದೆ ಎಂದಿದ್ದಾರೆ.

ADVERTISEMENT

‘ಚುನಾವಣಾ ಆಯೋಗವು ನಮ್ಮ ಮಾತನ್ನು ಕೇಳದಿದ್ದರೆ ಜನರ ಬಳಿ ಹೋಗುತ್ತೇವೆ. ನೀವು ಪ್ರಜಾಪ್ರಭುತ್ವದಿಂದ ಜನರನ್ನು ತೆಗೆದು ಹಾಕಿದರೆ ಏನು ಉಳಿಯುತ್ತದೆ’ ಎಂದು ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.