ADVERTISEMENT

ಜಾರಿ ನಿರ್ದೇಶನಾಲಯದಿಂದ ಚಿದಂಬರಂ ಬಂಧನ: ಐಎನ್‌ಎಕ್ಸ್‌ ಪ್ರಕರಣ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2019, 7:09 IST
Last Updated 16 ಅಕ್ಟೋಬರ್ 2019, 7:09 IST
   

ನವದೆಹಲಿ: ಐಎನ್‌ಎಕ್ಸ್‌ ಮೀಡಿಯಾ ಅಕ್ರಮ ಹಣ ವರ್ಗಾವಣೆ ಪ್ರಕರಣದ ವಿಚಾರಣೆಗಾಗಿಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ಬುಧವಾರ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಅವರನ್ನು ತಿಹಾರ್‌ ಜೈಲಿನಲ್ಲಿ ಬಂಧಿಸಿ,ತಮ್ಮ ಸುಪರ್ದಿಗೆ ತೆಗೆದುಕೊಂಡರು.

ಸ್ಥಳೀಯ ನ್ಯಾಯಾಲಯವು ಮಂಗಳವಾರ ಚಿದಂಬರಂ ಅವರ ವಿಚಾರಣೆಗೆ ಮತ್ತು ಅಗತ್ಯ ಎನಿಸಿದರೆ ಬಂಧನಕ್ಕೆ ಅನುಮತಿ ನೀಡಿದ ನಂತರ ಜಾರಿ ನಿರ್ದೇಶನಾಲಯದ ತನಿಖಾ ತಂಡವು ಚಿದಂಬರಂ ಅವರನ್ನು ಬಂಧಿಸಿತು ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ಜೈಲಿಗೆ ಬೆಳಿಗ್ಗೆ 8.15ಕ್ಕೆ ಬಂದ ತನಿಖಾಧಿಕಾರಿಗಳು ಕೆಲಕಾಲ ಚಿದಂಬರಂ ಅವರನ್ನು ವಿಚಾರಣೆಗೆ ಒಳಪಡಿಸಿದರು. ನಂತರ ಅಕ್ರಮ ಹಣ ವರ್ಗಾವಣೆ ನಿಯಂತ್ರಣ ಮಸೂದೆಯ ಅನ್ವಯ ಚಿದಂಬರಂ ಅವರನ್ನು ಬಂಧಿಸಿದರು. ಈ ಸಂದರ್ಭ ಚಿದಂಬರಂ ಪುತ್ರಿ ಕಾರ್ತಿ ಮತ್ತು ಪತ್ನಿ ನಳಿನಿ ಸಹ ಜೈಲು ಆವರಣದಲ್ಲಿದ್ದರು.

ಚಿದಂಬರಂ ಅವರ ವಿಚಾರಣೆ ಪೂರ್ಣಗೊಳಿಸಲು ಕೆಲ ದಿನಗಳ ಕಾಲ ತಮ್ಮ ಸುಪರ್ದಿಗೆ ನೀಡುವಂತೆ ಇಡಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸುವ ಸಾಧ್ಯತೆ ಇದೆ.

74 ವರ್ಷದ ಚಿದಂಬರಂ ಅವರನ್ನು ಸಿಬಿಐ ಆಗಸ್ಟ್‌ 21ರಂದು ಬಂಧಿಸಿತ್ತು. ಪ್ರಸ್ತುತ ಅವರುತಿಹಾರ್‌ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.