ADVERTISEMENT

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ರಿಯಾ, ಕುಟುಂಬ ಸದಸ್ಯರನ್ನು ಪ್ರಶ್ನಿಸಿದ ‘ಇಡಿ’

ಪಿಟಿಐ
Published 10 ಆಗಸ್ಟ್ 2020, 7:56 IST
Last Updated 10 ಆಗಸ್ಟ್ 2020, 7:56 IST
ರಿಯಾ ಚಕ್ರವರ್ತಿ
ರಿಯಾ ಚಕ್ರವರ್ತಿ   

ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣ ಕುರಿತಂತೆ ಜಾರಿ ನಿರ್ದೇಶನಾಲಯವು (ಇ.ಡಿ) ಸೋಮವಾರ ನಟಿ ರಿಯಾ ಚಕ್ರವರ್ತಿ ಮತ್ತು ಅವರ ಕುಟುಂಬ ಸದಸ್ಯರನ್ನು ತನಿಖೆಗೆ ಒಳಪಡಿಸಿತು.

ತಮ್ಮ ವಿರುದ್ಧ ಜಾರಿಯಾಗಿದ್ದ ಸಮನ್ಸ್ ಗೆ ಸ್ಪಂದಿಸಿ ರಿಯಾ, ಆಕೆಯ ಸೋದರ ಶೌವಿಕ್ ಮತ್ತು ತಂದೆ ಇಂದ್ರಜಿತ್ ಚಕ್ರವರ್ತಿ ಅವರು ಇಲ್ಲಿನ ಬಲ್ಲಾರ್ಡ್ ಎಸ್ಟೇಟ್ ಪ್ರದೇಶದಲ್ಲಿರುವ ಕೇಂದ್ರ ತನಿಖಾ ಸಂಸ್ಥೆಯ ಕಚೇರಿಗೆ ಬಂದಿದ್ದರು. ನಂತರ ರಿಯಾ ಅವರ ಮ್ಯಾನೇಜರ್ ಶ್ರುತಿ ಮೋದಿ ಅವರೂ ಹಾಜರಾದರು

ಈ ನಾಲ್ವರನ್ನು ತನಿಖಾ ಸಂಸ್ಥೆ ಆ. 7ರಂದೂ ಪ್ರಶ್ನಿಸಿತ್ತು. ಇದುವರೆಗೂ ಶೌವಿಕ್ ಅವರಿಗೆ ಒಟ್ಟು 22 ಗಂಟೆಗಳ ಕಾಲ, ರಿಯಾ ಅವರಿಗೆ ಒಟ್ಟು 8 ಗಂಟೆ ಕಾಲ ಸಂಸ್ಥೆಯ ಅಧಿಕಾರಿಗಳು ಪ್ರಶ್ನಿಸಿದ್ದಾರೆ.

ADVERTISEMENT

ರಿಯಾ ಅವರು ಸುಶಾಂತ್ ಜೊತೆಗಿನ ಸಂಬಂಧ, ವ್ಯವಹಾರ ಕುರಿತು ತನ್ನ ಅರ್ಜಿಯಲ್ಲಿ ತಿಳಿಸಿರುವ ಮಾಹಿತಿಗಳಿಗೆ ಸಂಬಂಧಿಸಿ ಪ್ರಶ್ನಿಸಿದೆ. ಆದಾಯ, ವೆಚ್ಚ ಮತ್ತು ಹೂಡಿಕೆ ಕುರಿತು ಭಿನ್ನ ಹೇಳಿಕೆಗಳನ್ನು ನೀಡಿರುವ ಕಾರಣ ಇನ್ನಷ್ಟು ಅವಧಿ ರಿಯಾ ಅವರನ್ನು ಪ್ರಶ್ನಿಸಬೇಕಿದೆ ಎಂದು ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.

ತನ್ನದೇ ಗಳಿಕೆ, ಉಳಿಕೆ ಮತ್ತು ಬ್ಯಾಂಕ್ ಸಾಲ ಪಡೆದು ಆಸ್ತಿ ಮಾಡಿರುವುದಾಗಿ ರಿಯಾ ಹೇಳಿದ್ದಾರೆ. ಅವರು ರೂ. 14-18 ಲಕ್ಷ ಆದಾಯ ಇರುವುದಾಗಿ ಆದಾಯ ತೆರಿಗೆ ದಾಖಲಾತಿ ಸಲ್ಲಿಸಿದ್ದಾರೆ, ಆದರೆ, ಅವರು ಹೂಡಿಕೆ ಮಾಡಿರುವ ಮೊತ್ತಕ್ಕೆ ಅದು ತಾಳೆ ಆಗುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.