ADVERTISEMENT

ಮೋದಿಗಾಗಲಿ, ಜಾರಿ ನಿರ್ದೇಶನಾಲಯಕ್ಕಾಗಲಿ ನಾವು ಹೆದರಲ್ಲ: ಡಿಎಂಕೆ

ಪಿಟಿಐ
Published 16 ಆಗಸ್ಟ್ 2025, 9:40 IST
Last Updated 16 ಆಗಸ್ಟ್ 2025, 9:40 IST
<div class="paragraphs"><p>ಡಿಎಂಕೆ ಪಕ್ಷದ ಲೋಗೊ</p></div>

ಡಿಎಂಕೆ ಪಕ್ಷದ ಲೋಗೊ

   

ಚೆನ್ನೈ: ಪಕ್ಷದ ಹಿರಿಯ ನಾಯಕ ಮತ್ತು ಸಚಿವ ಐ.ಪೆರಿಯಸಾಮಿ ಅವರ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ತೀಕ್ಷ್ಮವಾಗಿ ಪ್ರತಿಕ್ರಿಯಿಸಿರುವ ಆಡಳಿತಾರೂಢ ಡಿಎಂಕೆ, ‘ಮತಗಳ್ಳತನ’ದಿಂದ ಗಮನವನ್ನು ಬೇರೆಡೆ ಸೆಳೆಯುವ ಪ್ರಯತ್ನ ಇದಾಗಿದೆ ಎಂದಿದೆ.

ಪಕ್ಷದ ಪರವಾಗಿ ಹೇಳಿಕೆ ಬಿಡುಗಡೆ ಮಾಡಿರುವ ಡಿಎಂಕೆ ಸಂಘಟನಾ ಕಾರ್ಯದರ್ಶಿ ಆರ್. ಎಸ್. ಭಾರತಿ, ನಮ್ಮ ಪಕ್ಷವು ಮೋದಿಗಾಗಲಿ, ಜಾರಿ ನಿರ್ದೇಶನಾಲಯಕ್ಕಾಗಲಿ ಹೆದರುವುದಿಲ್ಲ ಎಂದು ತಿಳಿಸಿದ್ದಾರೆ.

ADVERTISEMENT

ಸ್ವಾಯತ್ತ ಸಂಸ್ಥೆಗಳನ್ನು ಬಿಜೆಪಿಯು ತನ್ನ ಚುನವಣಾ ಸಾಧನವಾಗಿ ಬಳಸುತ್ತಿದೆ ಎಂದು ಆರೋಪಿಸಿರುವ ಅವರು, ಇತರ ಪಕ್ಷಗಳ ಮೇಲೆ ಹಣ ಅಕ್ರಮ ವರ್ಗಾವಣೆ ಆರೋಪ ಮಾಡುವ ಅವರು(ಬಿಜೆಪಿ), ಮತಗಳ್ಳತನ ರಾಜಕೀಯದಲ್ಲಿ ತೊಡಗಿದ್ದಾರೆ ಎಂದು ಕಿಡಿಕಾರಿದ್ದಾರೆ.

‘ಚುನಾವಣಾ ಆಯೋಗವನ್ನು ಬಳಸಿಕೊಂಡು ಬಿಜೆಪಿ ಚುನಾವಣಾ ವಂಚನೆಯಲ್ಲಿ ತೊಡಗಿರುವುದು ಬಹಿರಂಗವಾಗಿದೆ. ದೇಶವೇ ಇದರಿಂದ ಆಘಾತಕ್ಕೊಳಗಾಗಿದೆ. ಇದರಿಂದ ಗಮನ ಬೇರೆಡೆ ಸೆಳೆಯಲು ಪೆರಿಯಸಾಮಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ಇ.ಡಿ ದಾಳಿ ನಡೆಸಲಾಗಿದೆ’ ಎಂದು ಅವರು ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.