ADVERTISEMENT

ಶಾಲಾ ಉದ್ಯೋಗ ಹಗರಣ: ವಿಚಾರಣೆಗೆ ಹಾಜರಾಗಲು ಅಭಿಷೇಕ್ ಬ್ಯಾನರ್ಜಿಗೆ ಇ.ಡಿ ನೋಟಿಸ್

ಪಿಟಿಐ
Published 8 ನವೆಂಬರ್ 2023, 7:25 IST
Last Updated 8 ನವೆಂಬರ್ 2023, 7:25 IST
<div class="paragraphs"><p>ಅಭಿಷೇಕ್ ಬ್ಯಾನರ್ಜಿ</p></div>

ಅಭಿಷೇಕ್ ಬ್ಯಾನರ್ಜಿ

   

ಕೋಲ್ಕತ್ತ: ಶಾಲಾ ಉದ್ಯೋಗ ಹಗರಣ ಸಂಬಂಧ ನ.9ರಂದು ವಿಚಾರಣೆಗೆ ಹಾಜರಾಗಬೇಕು ಎಂದು ತೃಣಮೂಲ ಕಾಂಗ್ರೆಸ್‌ ಸಂಸದ ಅಭಿಷೇಕ್‌ ಬ್ಯಾನರ್ಜಿಗೆ ಜಾರಿ ನಿರ್ದೇಶನಾಲಯ (ಇ.ಡಿ) ಬುಧವಾರ ನೋಟಿಸ್ ಜಾರಿ ಮಾಡಿದೆ.

ಬ್ಯಾನರ್ಜಿ ಅವರು ಆ ದಿನ ಇ.ಡಿ ಮುಂದೆ ಹಾಜರಾಗಲಿದ್ದಾರೆ ಎಂದು ಪಶ್ಚಿಮ ಬಂಗಾಳದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮತ್ತು ಟಿಎಂಸಿ ವಕ್ತಾರರಾದ ಶಶಿ ಪಂಜಾ ಹೇಳಿದ್ದಾರೆ. ಇದೊಂದು ಸೇಡಿನ ರಾಜಕಾರಣ ಎಂದು ಅವರು ಕಿಡಿಕಾರಿದ್ದಾರೆ.

ADVERTISEMENT

ಮುಂದಿನ ವರ್ಷ ಚುನಾವಣೆ ನಡೆಯಲಿರುವುದರಿಂದ ನಮ್ಮ ನಾಯಕರಿಗೆ ಬಿಜೆಪಿ ಹಿಂಸೆ ನೀಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಇದೇ ಪ್ರಕರಣ ಸಂಬಂಧ ವಿವಾರಣೆಗೆ ಹಾಜರಾಗಬೇಕು ಎಂದು ಅಕ್ಟೋಬರ್‌ 13ರಂದು ಇ.ಡಿ ನೋಟಿಸ್‌ ನೀಡಿತ್ತು. ಅದಕ್ಕೆ ಗೈರು ಹಾಜರಾಗಿದ್ದರಿಂದ ಅ.9 ಎಂದು ವಿಚಾರಣೆಗೆ ಹಾಜರಾಗಲು ನೋಟಿಸ್‌ ರವಾನಿಸಿತ್ತು.

ಸೆ. 13ರಂದು ಸುಮಾರು 9 ಗಂಟೆಗಳ ಕಾಲ ಇ.ಡಿ ಅವರನ್ನು ವಿಚಾರಣೆಗೆ ಒಳಪಡಿಸಿತ್ತು.

ಈ ಹಿಂದೆ ಕಲ್ಲಿದ್ದಲು ಹಗರಣ ಸಂಬಂಧವೂ ಅವರು ಎರಡು ಬಾರಿ ಇ.ಡಿ ವಿಚಾರಣೆಯನ್ನು ಎದುರಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.