ADVERTISEMENT

ಹಣ ಅಕ್ರಮ ವರ್ಗಾವಣೆ ಪ್ರಕರಣ; ಟೀನಾ ಅಂಬಾನಿಗೆ ಮತ್ತೆ ಸಮನ್ಸ್ ನೀಡಲು ಇಡಿ ಸಜ್ಜು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಫೆಬ್ರುವರಿ 2026, 5:49 IST
Last Updated 10 ಫೆಬ್ರುವರಿ 2026, 5:49 IST
<div class="paragraphs"><p>ಟೀನಾ ಅಂಬಾನಿ</p></div>

ಟೀನಾ ಅಂಬಾನಿ

   

ನವದೆಹಲಿ: ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಗಾಗಿ ರಿಲಯನ್ಸ್ ಗ್ರೂಪ್ ಅಧ್ಯಕ್ಷ ಅನಿಲ್ ಅಂಬಾನಿ ಅವರ ಪತ್ನಿ ಟೀನಾ ಅಂಬಾನಿ ಅವರ ವಿರುದ್ಧ ಹೊಸದಾಗಿ ಸಮನ್ಸ್ ನೀಡಲು ಮಾಡಲು ಜಾರಿ ನಿರ್ದೇಶನಾಲಯ (ಇಡಿ) ಸಜ್ಜಾಗಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ಸೋಮವಾರ ದೆಹಲಿಯ ಇಡಿ ಕಚೇರಿಗೆ ಹಾಜರಾಗಲು ಟೀನಾ ಅವರಿಗೆ ಸೂಚನೆ ನೀಡಲಾಗಿತ್ತು. ಆದರೆ, ಅವರು ಹಾಜರಾಗಿಲ್ಲ. ಹಾಗಾಗಿ, ಶೀಘ್ರದಲ್ಲೇ ಮತ್ತೆ ಸಮನ್ಸ್ ನೀಡುವುದಾಗಿ ಇಡಿ ಅಧಿಕಾರಿಗಳು ಪಿಟಿಐಗೆ ತಿಳಿಸಿದ್ದಾರೆ.

ADVERTISEMENT

ವರದಿಗಳ ಪ್ರಕಾರ, ನ್ಯೂಯಾರ್ಕ್‌ನ ಮ್ಯಾನ್‌ಹ್ಯಾಟನ್‌ನಲ್ಲಿ ಐಷಾರಾಮಿ ಕಾಂಡೋಮಿನಿಯಂ ಖರೀದಿಗೆ ಸಂಬಂಧಿಸಿದ ಹಣದ ಮೂಲದ ಕುರಿತು ವಿಚಾರಣೆ ನಡೆಸಲು ಟಿನಾ ಅವರನ್ನು ಕರೆಯಲಾಗಿತ್ತು.

ಇತ್ತೀಚೆಗೆ ಇಡಿ ಇದೇ ಪ್ರಕರಣದಲ್ಲಿ ಮಾಜಿ ಆರ್‌ಕಾಮ್ (ರಿಲಯನ್ಸ್ ಕಮ್ಯುನಿಕೇಷನ್) ಅಧ್ಯಕ್ಷ ಪುನೀತ್ ಗರ್ಗ್ ಅವರನ್ನು ವಿಚಾರಣೆ ನಡೆಸಿತ್ತು.

ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಅನಿಲ್ ಧೀರೂಭಾಯಿ ಅಂಬಾನಿ ಗ್ರೂಪ್ (ADAG) ವಿರುದ್ಧದ ಬ್ಯಾಂಕ್ ವಂಚನೆ ಮತ್ತು ಸಂಬಂಧಿತ ಆರ್ಥಿಕ ಅಕ್ರಮಗಳಿಗೆ ಸಂಬಂಧಿಸಿ ಹಲವು ಪ್ರಕರಣಗಳ ತನಿಖೆಗಾಗಿ ಎಸ್‌ಐಟಿ ರಚನೆ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.