ಮುಂಬೈ: ಶಿವಸೇನೆಯ (ಶಿಂದೆ ಬಣ) ಶಾಸಕಾಂಗ ಪಕ್ಷದ ನಾಯಕರಾಗಿ ಮುಖ್ಯಮಂತ್ರಿ ಏಕನಾಥ ಶಿಂದೆ ಭಾನುವಾರ ಇಲ್ಲಿ ಆಯ್ಕೆಯಾದರು.
ಖಾಸಗಿ ಹೋಟೆಲ್‌ನಲ್ಲಿ ನಡೆದ ಸಭೆಯಲ್ಲಿ ಶಾಸಕರಾಗಿ ಆಯ್ಕೆಯಾದ ಪಕ್ಷದ ಎಲ್ಲ 57 ಸದಸ್ಯರು ಇದ್ದರು.
‘ಮುಖ್ಯ ಸಚೇತಕ, ಇತರ ಪದಾಧಿಕಾರಿಗಳನ್ನು ನೇಮಿಸುವ ಅಧಿಕಾರವನ್ನು ಶಿಂದೆ ಅವರಿಗೆ ನೀಡಲಾಗಿದೆ’ ಎಂದು ಪಕ್ಷದ ನಾಯಕ ದೀಪಕ್ ಕೇಸಕರ್ ಹೇಳಿದ್ದಾರೆ.
‘ಹೊಸ ಸಿ.ಎಂ ಆಯ್ಕೆ ಕುರಿತಂತೆ ಮೈತ್ರಿ ಪಕ್ಷಗಳಲ್ಲಿ ಯಾವುದೇ ವಿವಾದ ಇಲ್ಲ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.