ADVERTISEMENT

ಪಟ್ಟು ಹಿಡಿದು ಬೈಕ್‌ನಲ್ಲಿ ಮನೆ ಸೇರಿದ ಸೋಂಕಿತೆ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2020, 10:55 IST
Last Updated 3 ಸೆಪ್ಟೆಂಬರ್ 2020, 10:55 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಕುಷ್ಟಗಿ (ಕೊಪ್ಪಳ ಜಿಲ್ಲೆ): ಇಲ್ಲಿಯ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸಾ ಘಟಕಕ್ಕೆ ದಾಖಲಾಗಿದ್ದ ವೃದ್ಧೆಯೊಬ್ಬರುಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ನಿರಾಕರಿಸಿ ಪಟ್ಟುಹಿಡಿದು ಬುಧವಾರ ಮನೆಗೆ ತೆರಳಿದರು.

ತಾಲ್ಲೂಕಿನ ಮಿಯಾಪುರ ಗ್ರಾಮದ 60 ವರ್ಷದ ವೃದ್ಧೆಗೆಕೋವಿಡ್‌ ದೃಢಪಟ್ಟಿತ್ತು. ಚಿಕಿತ್ಸೆ ನೀಡಿದ್ದರಿಂದ ಆರೋಗ್ಯ ಸುಧಾರಿಸಿತ್ತು.

ಮೂರು ದಿನಗಳ ಹಿಂದೆ ಮನೆಗೆ ತೆರಳುವುದಾಗಿ ವೈದ್ಯರಿಗೆ ಒತ್ತಾಯಿಸ ತೊಡಗಿದ್ದರು. ಇನ್ನೂ ಕೆಲ ದಿನಗಳವರೆಗೆ ಆಸ್ಪತ್ರೆಯಲ್ಲಿಯೇ ಇರಬೇಕಾಗುತ್ತದೆ ಎಂದು ವೈದ್ಯರು ಹೇಳಿದ್ದರು.

ADVERTISEMENT

ಎಷ್ಟೇ ಮನವೊಲಿಸಿದರೂ ವೃದ್ಧೆ ಪಟ್ಟು ಸಡಿಲಿಸಲಿಲ್ಲ. ಕುಟುಂಬದವರೂ ಕೂಡ ಹೋಂ ಐಸೋಲೇಷನ್ ಚಿಕಿತ್ಸೆ ಕೊಡಿಸುವುದಾಗಿ ಪಟ್ಟು ಹಿಡಿದಿದ್ದರು. ಅನಿವಾರ್ಯವಾಗಿ ಆಸ್ಪತ್ರೆಯಿಂದ ವೃದ್ಧೆಯನ್ನು ಬಿಡುಗಡೆ ಮಾಡಿದ ವೈದ್ಯರು ಆಕೆಯನ್ನು ಆಂಬುಲೆನ್ಸ್‌ ದಲ್ಲಿ ಕರೆದೊಯ್ಯಲು ವ್ಯವಸ್ಥೆ ಕಲ್ಪಿಸಿದ್ದರು. ಗ್ರಾಮಕ್ಕೆ ಆಂಬುಲೆನ್ಸ್‌ದಲ್ಲಿ ಹೋದರೆ ಜನ ತಿರಸ್ಕಾರದಿಂದ ನೋಡುತ್ತಾರೆ ಎಂಬ ಕಾರಣಕ್ಕೆ ಬೈಕ್‌ ಮೇಲೆ ತೆರಳಿದರು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಈ ಕುರಿತು ವಿವರಿಸಿದ ತಾಲ್ಲೂಕು ಆರೋಗ್ಯ ಅಧಿಕಾರಿ (ಪ್ರಭಾರ) ಡಾ.ಶರಣಪ್ಪ ಮೂಲಿಮನಿ, ಆಸ್ಪತ್ರೆಯಲ್ಲಿ ಒಬ್ಬರೇ ಚಿಕಿತ್ಸೆ ಪಡೆಯುವುದಕ್ಕೆ ಒಪ್ಪದ ಕಾರಣ ಹೋಂ ಐಸೋಲೇಷನಲ್ಲಿ ಇರಲು ಸೂಚಿಸಲಾಗಿದೆ. ಆರೋಗ್ಯ ಇಲಾಖೆ ಸಿಬ್ಬಂದಿ ಮನೆಯವರಿಗೆ ಸೂಚನೆ ನೀಡಿದ್ದಾರೆ. ಸದ್ಯವೃದ್ಧೆಆರೋಗ್ಯದಿಂದ ಇದ್ದಾರೆ ಎಂದರು.

‘ಆಸ್ಪತ್ರೆಯಲ್ಲಿ 12 ಜನ ರೋಗಿಗಳು ಇದ್ದು ಅವರಲ್ಲಿ ಐವರು ಬಿಡುಗಡೆಗೊಂಡಿದ್ದಾರೆ. ಇನ್ನೂ ಏಳು ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಲ ರೋಗಿಗಳಿಗೆ ಆಸ್ಪತ್ರೆ ವಾತಾವರಣಕ್ಕೆ ಹೊಂದಿಕೊಳ್ಳುವ ಮನಸ್ಥಿತಿ ಇರುವುದಿಲ್ಲ. ಏನಾದರೂ ನೆಪ ಹೇಳಿ ಮನೆಯಲ್ಲಿಯೇ ಉಳಿಯುತ್ತಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.