
ಲಖನೌ: ಚುನಾವಣಾ ಆಯೋಗವು ‘ಎಸ್‌ಐಆರ್’ ಮೂಲಕ ದೇಶದ ಜನರ ವಿರುದ್ಧ ದೊಡ್ಡ ಪಿತೂರಿ ನಡೆಸುತ್ತಿದೆ. ಇದು ವಸಾಹತುಶಾಹಿ ಯುಗಕ್ಕಿಂತ ಕೆಟ್ಟದಾದ ವ್ಯವಸ್ಥೆಗೆ ಜನರನ್ನು ನೂಕಲಿದೆ’ ಎಂದು ಸಮಾಜವಾದಿ ಪಕ್ಷದ (ಎಸ್‌ಪಿ) ಮುಖ್ಯಸ್ಥ ಅಖಿಲೇಶ್ ಯಾದವ್ ಹೇಳಿದ್ದಾರೆ.
ತಮ್ಮ ‘ಎಕ್ಸ್’ ಖಾತೆಯಲ್ಲಿ 20 ಸೆಕೆಂಡ್‌ಗಳ ವಿಡಿಯೊ ತುಣುಕೊಂದನ್ನು ಪೋಸ್ಟ್ ಮಾಡಿರುವ ಅವರು, ‘ವಿರೋಧ ಪಕ್ಷಗಳ ಜತೆಗೆ ಆಡಳಿತಾರೂಢ ಎನ್‌ಡಿಎನ ಮಿತ್ರಪಕ್ಷಗಳು ಒಟ್ಟಿಗೆ ಸೇರಿ ಬಿಜೆಪಿ ನಡೆಸುತ್ತಿರುವ ಈ ಮಹಾ ಪಿತೂರಿಯನ್ನು ಬಯಲು ಮಾಡಬೇಕು’ ಎಂದು ಆಗ್ರಹಿಸಿದ್ದಾರೆ.
‘ಎಸ್‌ಐಆರ್’ ಪ್ರಜಾಪ್ರಭುತ್ವಕ್ಕೆ ಮಾಡುತ್ತಿರುವ ಮಹಾ ವಂಚನೆ. ಜನರು ಇದರ ವಿರುದ್ಧ ಜಾಗೃತರಾಗಿರಬೇಕು. ಸದ್ಯ ಮತದಾರರ ಪಟ್ಟಿಯಿಂದ ಹೆಸರು ಕೈಬಿಡಲಾಗುತ್ತದೆ. ಮುಂದಿನ ದಿನಗಳಲ್ಲಿ ಭೂ ದಾಖಲೆ, ಪಡಿತರ ಚೀಟಿ, ಜಾತಿ–ಆದಾಯ ಪ್ರಮಾಣಪತ್ರ, ಬ್ಯಾಂಕ್ ಖಾತೆಗಳಿಂದಲೂ ಮಧ್ಯಮವರ್ಗದ ಹೆಸರನ್ನು ತೆಗೆದುಹಾಕಲಾಗುತ್ತದೆ‘ ಎಂದು ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.