ADVERTISEMENT

ಚುನಾವಣಾ ಆಯೋಗದಿಂದ ಇಂದು ಸುದ್ದಿಗೋಷ್ಠಿ: ಬಿಹಾರ ಚುನಾವಣೆ, ಉಪಚುನಾವಣೆಗಳು ಘೋಷಣೆ?

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2020, 4:41 IST
Last Updated 25 ಸೆಪ್ಟೆಂಬರ್ 2020, 4:41 IST
ಚುನಾವಣಾ ಮತಯಂತ್ರ
ಚುನಾವಣಾ ಮತಯಂತ್ರ    

ನವದೆಹಲಿ: ಚುನಾವಣಾ ಆಯೋಗವು ಬಿಹಾರ ವಿಧಾನಸಭಾ ಚುನಾವಣೆಯ ವೇಳಾಪಟ್ಟಿಯನ್ನು ಶುಕ್ರವಾರ ಪ್ರಕಟಿಸಲು ಸಜ್ಜಾಗಿದೆ. ಈ ಸಂಬಂಧ ಶುಕ್ರವಾರ ಮಧ್ಯಾಹ್ನ 12.30 ಕ್ಕೆ ಆಯೋಗಪತ್ರಿಕಾಗೋಷ್ಠಿ ಕರೆದಿದೆ.

243 ಸದಸ್ಯ ಬಲದ ಬಿಹಾರ ವಿಧಾನಸಭೆ ಅವಧಿಯು ನವೆಂಬರ್ 29 ರಂದು ಕೊನೆಗೊಳ್ಳಲಿದೆ.

ದೇಶದ 15 ರಾಜ್ಯಗಳಲ್ಲಿ ಹಲವು ಕಾರಣಕ್ಕೆ ತೆರವಾಗಿರುವ 64 ವಿಧಾನಸಭೆ ಸ್ಥಾನಗಳು ಮತ್ತು ಲೋಕಸಭೆ ಸ್ಥಾನಕ್ಕೆ ನಡೆಯಬೇಕಾದ ಉಪ ಚುನಾವಣೆಯ ವೇಳಾಪಟ್ಟಿಯನ್ನೂ ಆಯೋಗ ಇಂದೇ ಘೋಷಿಸುವ ಸಾಧ್ಯತೆ ಇದೆ.

ADVERTISEMENT

ಖಾಲಿ ಇರುವ 64 ವಿಧಾನಸಭಾ ಸ್ಥಾನಗಳಲ್ಲಿ 27 ಸ್ಥಾನಗಳು ಮಧ್ಯಪ್ರದೇಶದಲ್ಲೇ ಇವೆ. 27 ಸ್ಥಾನಗಳ ಪೈಕಿ ಬಹುತೇಕ ಸ್ಥಾನಗಳು ಬಿಜೆಪಿ ಸೇರಲು ಕಾಂಗ್ರೆಸ್‌ ತೊರೆದಿದ್ದ ಶಾಸಕರ ಕ್ಷೇತ್ರಗಳೇ ಆಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.