ADVERTISEMENT

ಮುಂಬೈ | ವಿದ್ಯುತ್‌ ಚಾಲಿತ ಡಬಲ್‌ ಡೆಕ್ಕರ್‌ ಬಸ್‌ಗೆ ಬೆಂಕಿ

ಪಿಟಿಐ
Published 15 ಜುಲೈ 2025, 9:27 IST
Last Updated 15 ಜುಲೈ 2025, 9:27 IST
   

ಮುಂಬೈ: ಬೃಹತ್‌ ಮುಂಬೈ ವಿದ್ಯುತ್ ಸರಬರಾಜು ಮತ್ತು ಸಾರಿಗೆಗೆ(ಬಿಇಎಸ್‌ಟಿ) ಸೇರಿದ ವಿದ್ಯುತ್‌ ಚಾಲಿತ ಡಬಲ್‌ ಡೆಕ್ಕರ್‌ ಬಸ್‌ನಲ್ಲಿ ಮಂಗಳವಾರ ಬೆಂಕಿ ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದಕ್ಷಿಣ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್‌ ಟರ್ಮಿನಲ್‌ ಬಳಿಯ ಪೋರ್ಟ್‌ ಏರಿಯಾದಲ್ಲಿ ಘಟನೆ ಜರುಗಿದ್ದು, ಯಾರಿಗೂ ಗಾಯವಾಗಿಲ್ಲ.

ಘಟನೆ ನಡೆದ ತಕ್ಷಣವೇ ಅಗ್ನಿ ಶಾಮಕ ದಳವು ಸ್ಥಳಕ್ಕೆ ಆಗಮಿಸಿ, ಪರಿಸ್ಥಿತಿ ನಿಭಾಯಿಸಿದೆ ಎಂದು ಅಗ್ನಿ ಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಬಸ್‌ನ ಮುಂಭಾಗದ ಟೈರ್‌ ಬಳಿಯಿದ್ದ ಹೈ–ವೋಲ್ಟೇಜ್‌ ಬ್ಯಾಟರಿಯ ಬಳಿ ಬೆಂಕಿ ಕಾಣಿಸಿಕೊಂಡಿದೆ. ಘಟನೆ ಜರುಗಿದ ಬಸ್‌ನಲ್ಲಿ ಪ್ರಯಾಣಿಕರಿದ್ದರು. ತಕ್ಷಣವೇ ಬಸ್‌ನ ಡ್ರೈವರ್‌ ಬೆಂಕಿಯನ್ನು ಗಮನಿಸಿ ಪ್ರಯಾಣಿಕರನ್ನು ಎಚ್ಚರಿಸಿದ್ದಾರೆ ಎಂದು ಬಿಇಎಸ್‌ಟಿ ವಕ್ತಾರ ತಿಳಿಸಿದರು.

ಕಳೆದ ಮೂರು ವರ್ಷಗಳಿಂದ ಬಿಇಎಸ್‌ಟಿ ಅವರು ವಿದ್ಯುತ್‌ ಚಾಲಿತ ಡಬಲ್‌ ಡೆಕ್ಕರ್‌ ಬಸ್‌ ಸೇವೆಯನ್ನು ನೀಡುತ್ತಿದೆ. ಇದೇ ಮೊದಲ ಬಾರಿಗೆ ಈ ರೀತಿಯ ಘಟನೆ ಸಂಭವಿಸಿದೆ. ಅಶೋಕ್‌ ಲೈಲ್ಯಾಂಡ್‌ ಕಂಪನಿಯಿಂದ ಬಿಇಎಸ್‌ಟಿ ಅವರು ಐವತ್ತು ಬಸ್‌ಗಳನ್ನು ಖರೀದಿಸಿದ್ದರು. ಅದರಲ್ಲಿ ವಿದ್ಯುತ್‌ ಚಾಲಿತ ಡಬಲ್‌ ಡೆಕ್ಕರ್‌ ಬಸ್‌ ಕೂಡ ಸೇರಿದೆ ಎಂದು ಮಾಹಿತಿ ನೀಡಿದ್ದಾರೆ.

ಬಸ್‌ನಲ್ಲಿ ಶಾರ್ಟ್‌ ಸರ್ಕ್ಯೂಟ್‌ ಆಗಿ ಬೆಂಕಿ ಕಾಣಿಸಿಕೊಂಡಿರಬಹುದು ಎಂದು ಅಂದಾಜಿಸಲಾಗಿದೆ. ಘಟನೆಗೆ ನಿಖರ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.