ನವದೆಹಲಿ: ದೇಶದಲ್ಲಿ ಕಾಡಾನೆಗಳ ಸಂಖ್ಯೆ ಪ್ರಸ್ತುತ 22,446 ಇದ್ದು, ಇವುಗಳ ಸಂಖ್ಯೆಯಲ್ಲಿ ಶೇಕಡ 18ರಷ್ಟು ಇಳಿಕೆ ಕಂಡುಬಂದಿದೆ. ದೇಶದಲ್ಲಿ ಮೊಟ್ಟಮೊದಲ ಬಾರಿಗೆ ನಡೆಸಿದ ಡಿಎನ್‌ಎ ಆಧಾರಿತ ಗಣತಿಯಿಂದ ಈ ಅಂಶ ತಿಳಿದುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ಮಂಗಳವಾರ ಬಿಡುಗಡೆ ಮಾಡಿರುವ, ‘ಅಖಿಲ ಭಾರತ ಸಮಕಾಲಿಕ ಆನೆ ಗಣತಿ’ (ಎಸ್‌ಎಐಇಇ)–2025ರ ವರದಿಯಲ್ಲಿ ಈ ಮಾಹಿತಿ ಇದೆ. 2021ರಲ್ಲಿ ಈ ಗಣತಿ ನಡೆದಿತ್ತು.
2017ರಲ್ಲಿ ಕಾಡಾನೆಗಳ ಸಂಖ್ಯೆ 27,312 ಇತ್ತು. ಸದ್ಯ, ದೇಶದಲ್ಲಿ ಕಾಡಾನೆಗಳ ಸಂಖ್ಯೆ ಸರಾಸರಿ 22,446 ಇದೆ ಎಂದು ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ.
‘ಪ್ರತಿ ಸಲ ವಾಡಿಕೆಯಂತೆ ನಡೆಯುವ ಗಣತಿ ಹಾಗೂ ಡಿಎನ್‌ಎ ಆಧಾರಿತ ಗಣತಿಗೆ ಬಳಸುವ ವಿಧಾನಗಳು ಬೇರೆ. ಹೀಗಾಗಿ ಈ ಎರಡೂ ವಿಧಾನಗಳನ್ನು ಹೋಲಿಕೆ ಮಾಡಬಾರದು’ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.