ADVERTISEMENT

ಕೃಷ್ಣಗಿರಿಯಲ್ಲಿ ಹಿಡಿದ ಆನೆಯನ್ನು ಎಂಟಿಆರ್‌ಗೆ ಬಿಟ್ಟ ಅರಣ್ಯ ಇಲಾಖೆ

ಪಿಟಿಐ
Published 8 ಏಪ್ರಿಲ್ 2021, 9:10 IST
Last Updated 8 ಏಪ್ರಿಲ್ 2021, 9:10 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಉದಕಮಂಡಲ (ತಮಿಳುನಾಡು): ತಮಿಳುನಾಡಿನ ಕೃಷ್ಣಗಿರಿ ಸಮೀಪ ಸೆರೆ ಹಿಡಿಯಲಾಗಿದ್ದ 15 ವರ್ಷದ ಆನೆಯನ್ನು ಗುರುವಾರ ಮುಂಜಾನೆ ಸುರಕ್ಷಿತವಾಗಿ ಅಸುವರಮಟ್ಟಂನಲ್ಲಿರುವ ಮುದುಮಲೈ ಹುಲಿ ಸಂರಕ್ಷಿತ ಅರಣ್ಯ (ಎಂಟಿಆರ್‌) ಪ್ರದೇಶಕ್ಕೆ ಬಿಡಲಾಗಿದೆ.

ಈ ಗಂಡು ಆನೆ ಕೆಲವು ದಿನಗಳಿಂದ ಕೃಷ್ಣಗಿರಿ ಸುತ್ತಮುತ್ತಾ ತೀವ್ರ ಉಪಟಳ ನೀಡುತ್ತಿತ್ತು. ಅರಣ್ಯಾಧಿಕಾರಿಗಳ ಸತತ ಪ್ರಯತ್ನದ ನಂತರ 48 ಗಂಟೆಗಳ ಹಿಂದೆ, ಆನೆಯನ್ನು ಹಿಡಿಯಲಾಯಿತು. ಈಗ ಅದನ್ನು ಎಂಟಿಆರ್‌ ಅರಣ್ಯದೊಳಕ್ಕೆ ಬಿಡಲಾಗಿದೆ.

ಸೌಮ್ಯ ಸ್ವಭಾವದ ಆನೆಯ ಚಲನವಲನಗಳನ್ನು ಅರಣ್ಯ ಅಧಿಕಾರಿಗಳ ತಂಡದವರು ನಿರಂತರವಾಗಿ ನಿಗಾ ವಹಿಸುತ್ತಿದ್ದಾರೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

ADVERTISEMENT

ಅಸುವರಮಟ್ಟಂ ಅರಣ್ಯದಲ್ಲಿ 50 ಸಾವಿರ ಲೀಟರ್ ನೀರು ಸಂಗ್ರಹ ಸಾಮರ್ಥ್ಯದ ಕೊಳವನ್ನು ನಿರ್ಮಿಸಲಾಗಿದೆ. ಇದಕ್ಕೆ ಸೌರಶಕ್ತಿ ಚಾಲಿತ ಮೋಟಾರ್‌ನಿಂದ ಕೊಳವೆಬಾವಿಯ ನೀರನ್ನು ತುಂಬಿಸಲಾಗುತ್ತದೆ. ಹೀಗಾಗಿ ಆನೆಯಂತಹ ಪ್ರಾಣಿಗಳಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.