ADVERTISEMENT

ಫಾರ್ಮ್‌ಹೌಸ್‌ನಲ್ಲಿ 70 ಅಡಿ ಮೇಲಿಂದ ಕುಸಿದು ಬಿದ್ದ ಎಲಿವೇಟರ್, 6 ಸಾವು 

​ಪ್ರಜಾವಾಣಿ ವಾರ್ತೆ
Published 1 ಜನವರಿ 2020, 8:45 IST
Last Updated 1 ಜನವರಿ 2020, 8:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಇಂದೋರ್: ಮಧ್ಯಪ್ರದೇಶದ ಖ್ಯಾತ ಉದ್ಯಮಿ ಪುನೀತ್ ಅಗರವಾಲ್ ಅವರ ಫಾರ್ಮ್‌ಹೌಸ್‌ನಲ್ಲಿದ್ದ ಎಲಿವೇಟರ್ ಕುಸಿದು ಬಿದ್ದು, ಪುನೀತ್ ಮತ್ತು ಅವರ ಕುಟುಂಬದ ಐವರು ಸದಸ್ಯರು ಸಾವಿಗೀಡಾದ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಸುಮಾರು 70 ಅಡಿ ಮೇಲಿಂದ ಎಲಿವೇಟರ್ ಕುಸಿದು ಬಿದ್ದಿದೆ.

ಪುನೀತ್ ಅಗರವಾಲ್ , ಅವರ ಮಗಳು ಪಲಕ್ ಅಗರ್‌ವಾಲ್ (27), ಅಳಿಯ ಪಲಕೇಶ್ ಅಗರವಾಲ್, ಮೊಮ್ಮಗ ನಾವ್ (2) ಮತ್ತು ಸಂಬಂಧಿಗಳಾದ ಗೌರವ್ (40) ಮತ್ತು ಆರ್ಯವೀರ್ (11) ಈ ಘಟನೆಯಲ್ಲಿ ಸಾವಿಗೀಡಾಗಿದ್ದಾರೆ. ಅಗರ್‌ವಾಲ್ ಸಂಬಂಧಿ ನಿಧಿ ಎಂಬಾಕೆಗೆ ತೀವ್ರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಕೆಯ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ.

ಮಂಗಳವಾರ ಪುನೀತ್ ಅಗರವಾಲ್ ಮತ್ತು ಅವರ ಕುಟುಂಬ ಹೊಸ ವರ್ಷಾಚರಣೆಗಾಗಿ ಫಾರ್ಮ್‌ಹೌಸ್‌ನಲ್ಲಿ ಸೇರಿದ್ದರು. ಹೊಸ ವರ್ಷದ ಆಚರಣೆ ನಂತರ ಅವರು ಎಲಿವೇಟರ್‌ನಲ್ಲಿ ಕೆಳಗಿಳಿಯುತ್ತಿದ್ದಾಗ ಸುಮಾರು 70 ಅಡಿಗಿಂತ ಎತ್ತರದಲ್ಲಿ ಅದು ಕುಸಿದು ಬಿದ್ದಿದೆ ಎಂದು ಬದಗೊಂಡ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ರಾಬರ್ಟ್ ಗಿರ್ವಾಲ್ ಹೇಳಿದ್ದಾರೆ.

ADVERTISEMENT

ಮರಣೋತ್ತರ ಪರೀಕ್ಷೆ ನಂತರ ಮೃತದೇಹಗಳನ್ನು ಕುಟುಂಬಕ್ಕೆ ಬಿಟ್ಟುಕೊಡಲಾಗಿದೆ. ಫಾರೆನ್ಸಿಕ್ ಸಯನ್ಸ್ ಲ್ಯಾಬೊರೇಟರಿ ತಂಡವು ಇಲ್ಲಿಗೆ ಭೇಟಿ ನೀಡಿದ್ದು, ಘಟನೆ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. ಕಟ್ಟಡ ನಿರ್ಮಾಣ ಕಂಪನಿಯಾಗಿರುವಪಾಥ್ ಇಂಡಿಯಾ ಲಿಮಿಟೆಡ್‌ನ ಮಾಲೀಕರಾಗಿದ್ದಾರೆ ಪುನೀತ್ ಅಗರವಾಲ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.