ADVERTISEMENT

ಎಲ್ಗರ್ ಪರಿಷತ್ ಆರೋಪಿ ಗೌತಮ್‌ ಬೇರೆ ಬ್ಯಾರಕ್‌ಗೆ ಸ್ಥಳಾಂತರ

ಪಿಟಿಐ
Published 24 ಅಕ್ಟೋಬರ್ 2021, 15:21 IST
Last Updated 24 ಅಕ್ಟೋಬರ್ 2021, 15:21 IST
ಗೌತಮ್ ನವ್ಲಾಖಾ
ಗೌತಮ್ ನವ್ಲಾಖಾ   

ಮುಂಬೈ: ‘ಎಲ್ಗರ್ ಪರಿಷತ್– ಮಾವೋವಾದಿ ಸಂಪರ್ಕ ಪ್ರಕರಣದಲ್ಲಿ ಬಂಧಿತರಾಗಿರುವ ಕಾರ್ಯಕರ್ತ ಗೌತಮ್ ನವ್ಲಾಖಾ ಅವರನ್ನು ನವಿ ಮುಂಬೈನ ತಲೋಜಾ ಜೈಲಿನಲ್ಲಿರುವ ಹೆಚ್ಚಿನ ಭದ್ರತೆಯ ಬ್ಯಾರಕ್‌ಗೆ ಸ್ಥಳಾಂತರಿಸಲಾಗಿದೆ’ ಎಂದು ಅವರ ಪತ್ನಿ ಸಭಾ ಹುಸೇನ್ ಭಾನುವಾರ ತಿಳಿಸಿದ್ದಾರೆ.

‘70 ವರ್ಷ ವಯಸ್ಸಿನವರ ಗೌತಮ್ ಅವರ ಆರೋಗ್ಯವು ದುರ್ಬಲವಾಗಿದ್ದು, ಬೇರೆ ಬ್ಯಾರಕ್‌ಗೆ ಸ್ಥಳಾಂತರ ಮಾಡಿರುವುದರಿಂದ ಆರೋಗ್ಯವು ಮತ್ತಷ್ಟು ಹದಗೆಡುವ ಸಾಧ್ಯತೆ ಇದೆ’ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT