ADVERTISEMENT

BSF ಸ್ಥಾಪನಾ ದಿನ: ಯೋಧರ ಶೌರ್ಯಕ್ಕೆ ಮೋದಿ, ರಾಹುಲ್ ಸೇರಿದಂತೆ ಗಣ್ಯರಿಂದ ಶ್ಲಾಘನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಡಿಸೆಂಬರ್ 2024, 6:16 IST
Last Updated 1 ಡಿಸೆಂಬರ್ 2024, 6:16 IST
<div class="paragraphs"><p>ಬಿಎಸ್‌ಎಫ್‌ ಯೋಧರು</p></div>

ಬಿಎಸ್‌ಎಫ್‌ ಯೋಧರು

   

ಚಿತ್ರಕೃಪೆ: X / @AmitShah

ನವದೆಹಲಿ: ಗಡಿ ಭದ್ರತಾ ಪಡೆಯು (ಬಿಎಸ್‌ಎಫ್‌) ರಾಷ್ಟ್ರಕ್ಕಾಗಿ ಅಸಾಧಾರಣ ಸೇವೆ ಸಲ್ಲಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ನಾಯಕರು ಶ್ಲಾಘಿಸಿದ್ದಾರೆ.

ADVERTISEMENT

ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (ಸಿಎಪಿಎಫ್‌) ಬಿಎಸ್‌ಎಫ್‌ ಸ್ಥಾಪನಾ ದಿನವನ್ನುದ್ದೇಶಿಸಿ ಭಾನುವಾರ ಟ್ವೀಟ್‌ ಮಾಡಿರುವ ಮೋದಿ, 'ಗಡಿ ಭದ್ರತಾ ಪಡೆಗೆ ಅದರ ಸ್ಥಾಪನಾ ದಿನದ ಶುಭಾಶಯಗಳು. ಧೈರ್ಯ, ಸಮರ್ಪಣೆ, ಅಸಾಧಾರಣ ಸೇವೆಯಿಂದ ಕೂಡಿರುವ ಬಿಎಸ್‌ಎಫ್‌ ನಿರ್ಣಾಯಕ ರಕ್ಷಣಾ ಮಾರ್ಗವಾಗಿದೆ. ಅದರ ಕಣ್ಗಾವಲು ರಾಷ್ಟ್ರಕ್ಕೆ ರಕ್ಷಣೆ ನೀಡುತ್ತಿದೆ' ಎಂದು ಬರೆದುಕೊಂಡಿದ್ದಾರೆ.

ಅಮಿತ್‌ ಶಾ ಅವರು, 'ಬಿಎಸ್‌ಎಫ್‌ ಯೋಧರು ಅಚಲ ಸಂಕಲ್ಪದೊಂದಿಗೆ ಭಾರತದ ಗೌರವ ಮತ್ತು ಆಕಾಂಕ್ಷೆಗಳನ್ನು ರಕ್ಷಿಸುವ ಗುರಾಣಿಯಾಗಿದ್ದಾರೆ. ಪ್ರಾಣ ತ್ಯಾಗಕ್ಕೂ ಹಿಂದೇಟು ಹಾಕುವುದಿಲ್ಲ. ಅವರ ಶೌರ್ಯವು ಮುಂದಿನ ಪೀಳಿಗೆಗೆ ಸ್ಫೂರ್ತಿಯಾಗಲಿದೆ' ಎಂದು ಬಣ್ಣಿಸಿದ್ದಾರೆ.

'ದೇಶದ ಗಡಿಗಳನ್ನು ರಕ್ಷಣೆಗೆ ಮುಂಚೂಣಿಯಲ್ಲಿ ನಿಲ್ಲುವ ಬಿಎಸ್‌ಎಫ್‌ನ ಎಲ್ಲ ಸಿಬ್ಬಂದಿಗೂ ಶುಭಾಶಯಗಳು. ಅಚಲವಾಗಿರುವ ನಿಮ್ಮ ಬದ್ಧತೆ, ಧೈರ್ಯ, ಸೇವೆ ಮತ್ತು ತ್ಯಾಗಗಳು ಪ್ರತಿದಿನವೂ ನಮಗೆ ಸ್ಫೂರ್ತಿ ನೀಡುತ್ತವೆ' ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಬರೆದುಕೊಂಡಿದ್ದಾರೆ.

1965ರ ಭಾರತ-ಪಾಕಿಸ್ತಾನ ಯುದ್ಧದ ಬೆನ್ನಲ್ಲೇ, ಗಡಿಗಳಲ್ಲಿ ಭದ್ರತೆಯನ್ನು ಖಾತ್ರಿಪಡಿಸಿಕೊಳ್ಳುವ ಸಲುವಾಗಿ ಬಿಎಸ್‌ಎಫ್‌ ಅನ್ನು ಈ ದಿನ ಸ್ಥಾಪಿಸಲಾಯಿತು. ಪಾಕಿಸ್ತಾನ ಮತ್ತು ಬಾಂಗ್ಲಾದೇಶದೊಂದಿಗೆ ಭಾರತ ಹಂಚಿಕೊಂಡಿರುವ ಗಡಿ ಪ್ರದೇಶದಲ್ಲಿ ಬಿಎಸ್‌ಎಫ್‌ ಅನ್ನು ನಿಯೋಜಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.