ADVERTISEMENT

ನಾಗರಿಕ ವಿಮಾನಯಾನ ಸಚಿವಾಲಯದಲ್ಲಿ ಕೊರೊನಾ ಸೋಂಕು: ಸಂಸತ್ತಿನ ನೌಕರರಲ್ಲಿ ಕಳವಳ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2020, 9:48 IST
Last Updated 22 ಏಪ್ರಿಲ್ 2020, 9:48 IST
ಮಂಗಳವಾರ ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಸಂಸತ್ತಿನ ಉದ್ಯೋಗಿಯೊಬ್ಬರು ಮಾಸ್ಕ್ ಧರಿಸಿ ಕಚೇರಿಗೆ ಹೋಗುತ್ತಿರುವುದು.
ಮಂಗಳವಾರ ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಸಂಸತ್ತಿನ ಉದ್ಯೋಗಿಯೊಬ್ಬರು ಮಾಸ್ಕ್ ಧರಿಸಿ ಕಚೇರಿಗೆ ಹೋಗುತ್ತಿರುವುದು.   

ನವದೆಹಲಿ: ನಾಗರಿಕ ವಿಮಾನಯಾನ ಸಚಿವಾಲಯದ ಉದ್ಯೋಗಿಯೊಬ್ಬರಿಗೆ ಕೊರೊನಾ ಸೋಂಕು ತಗುಲಿದ್ದು, ಸಂಸತ್ತಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಉದ್ಯೋಗಿಗಳಿಗೆ ಈಗ ಕೊರೊನಾ ಸೋಂಕಿನ ತಳಮಳ ಆರಂಭವಾಗಿದೆ.

ನಾಗರಿಕ ವಿಮಾನಯಾನ ಸಚಿವಾಲಯ ಪ್ರಕರಣಕೇಂದ್ರ ಸರ್ಕಾರದಸಚಿವಾಲಯದಲ್ಲಿ ಸೋಂಕು ತಗುಲಿರುವ ಮೊದಲ ಪ್ರಕರಣ ಎಂದು ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಪುರಿ ತಿಳಿಸಿದ್ದಾರೆ.ನವದೆಹಲಿಯ ಜೋರ್‌‌ಭಾಗ್ರಾಜೀವ್‌ಗಾಂಧಿ ಭವನದಸಚಿವಾಲಯದ ಪ್ರಧಾನ ಕಚೇರಿಯನ್ನು ನಿಯಮದಂತೆಸೀಲ್ ಮಾಡಲಾಗುವುದು. ಸಿಬ್ಬಂದಿಯೊಂದಿಗೆ ಸಂಪರ್ಕ ಹೊಂದಿರುವ ಎಲ್ಲಾ ಸಹೋದ್ಯೋಗಿಗಳನ್ನು ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಸಚಿವರು ಹೇಳಿದ್ದಾರೆ.

ಸೋಂಕು ತಗುಲಿರುವ ಉದ್ಯೋಗಿ ಏಪ್ರಿಲ್ 15 ರಂದು ಕಚೇರಿಗೆ ಹಾಜರಾಗಿದ್ದರು. ನಂತರಅನಾರೋಗ್ಯ ಕಾಣಿಸಿಕೊಂಡ ಕಾರಣ ಏಪ್ರಿಲ್ 21 ರಂದು ತಪಾಸಣೆಗೆ ಒಳಪಟ್ಟರು. ರಕ್ತಪರೀಕ್ಷೆಯ ವರದಿ ಬಂದಾಗಸೋಂಕು ತಗುಲಿರುವುದು ದೃಢಪಟ್ಟಿದೆ. ಕೊರೊನಾ ತಗುಲಿರುವುದು ದೃಢಪಟ್ಟ ನಂತರಸೋಂಕು ಹರಡದಂತೆ ಇರುವ ಎಲ್ಲಾ ಕಠಿಣ ಕ್ರಮಗಳನ್ನು ಕಟ್ಟು ನಿಟ್ಟಾಗಿ ಜಾರಿ ಮಾಡಲಾಗುವುದು.
ರೋಗಿಯ ಸಂಪರ್ಕದಲ್ಲಿದ್ದ ಎಲ್ಲಾ ಸಹೋದ್ಯೋಗಿಗಳನ್ನು ಪ್ರತ್ಯೇಕವಾಗಿ ತಮ್ಮ ಮನೆಗಳಲ್ಲಿಯೇ ಸ್ವಯಂ ಕ್ರಾರಂಟೈನ್‌‌ಗೆ ಒಳಗಾಗುವಂತೆ ತಿಳಿಸಲಾಗಿದೆ ಎಂದು ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಲಾಗಿದೆ.

ADVERTISEMENT

ಈ ವಿವರ ಲಭ್ಯವಾದ ನಂತರ ದೆಹಲಿ ಸರ್ಕಾರ ಇಡೀ ಪ್ರದೇಶವನ್ನು ತನ್ನ ವಶಕ್ಕೆ ತೆಗೆದುಕೊಂಡಿದೆ. ಅಲ್ಲದೆ, ಸೋಂಕು ಹರಡದಂತೆ ಎಲ್ಲಾ ಮುನ್ನೆಚ್ಚರಿಕೆ ಕ್ರಮ, ಸೋಂಕು ತಗುಲಿರುವವರನ್ನು ಪತ್ತೆಹಚ್ಚುವುದಕ್ಕೆ ಅದು ಮುಂದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಕೊರೊನಾ ಪಾಸಿಟಿವ್ ಕಂಡು ಬಂದ ಉದ್ಯೋಗಿಗೆ ಕೆಲವು ದಿನಗಳ ಹಿಂದೆ ಗಂಟಲು ನೋವು ಕಾಣಿಸಿಕೊಂಡಿತ್ತು. ಈ ಕಾರಣದಿಂದಾಗಿಮಂಗಳವಾರ ರಕ್ತಪರೀಕ್ಷೆ ನಡೆಸಲಾಯಿತುಎಂದು ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಲೋಕಸಭಾ ಸಚಿವಾಲಯದ ಮನೆಕೆಲಸದಾಕೆ ಮತ್ತು ರಾಷ್ಟ್ರಪತಿ ಭವನ ಪೌರ ಕಾರ್ಮಿಕರ ಸೊಸೆಗೆ ಕೊರೊನಾ ಸೋಂಕು ತಗುಲಿದ್ದು, ಈ ಪರೀಕ್ಷೆ ನಡೆಸಿದ ಒಂದು ದಿನದ ಬಳಿಕ ಈ ಬೆಳವಣಿಗೆ ಕಂಡು ಬಂದಿದೆ.

ರಾಷ್ಟ್ರಪತಿ ಭವನದಲ್ಲಿ ಕೆಲಸ ಮಾಡುವ ಉದ್ಯೋಗಿಗಳು 125 ವಸತಿ ಸಮುಚ್ಛಯದ ಕ್ಲಸ್ಟರ್‌ನಲ್ಲಿ ವಾಸವಾಗಿದ್ದಾರೆ. ಈಗಾಗಲೆ ದೆಹಲಿ
ಸರ್ಕಾರ ಈ ಪ್ರದೇಶವನ್ನು ಸೀಲ್‌ಮಾಡಿದೆ. ಸಂಸತ್ತಿನ ಉದ್ಯೋಗಿ ವಾಸಿಸುತ್ತಿದ್ದ ಕಾಳಿ ಬಾರಿ ಮಾರ್ಗದ ಬಳಿ ಹೆಚ್ಚಿನ ಸಂಖ್ಯೆಯಮನೆಗಳನ್ನು ನವದೆಹಲಿ ಮುನ್ಸಿಪಲ್ ಕೌನ್ಸಿಲ್ ಕಂಟೈನ್ ಮೆಂಟ್ ಜೋನ್ ಆಗಿಘೋಷಿಸಿದೆ.

ಈ ಬೆಳವಣಿಗೆ ಕಂಡು ಬಂದ ನಂತರ ಸರ್ಕಾರ ಸಂಸತ್ತಿನ ಸಚಿವಾಲಯದ ಉದ್ಯೋಗಿಗಳಿಗಾಗಿಯೇ ಹೊಸ ಮಾರ್ಗ ಸೂಚಿಗಳನ್ನು ಪ್ರಕಟಿಸಿದೆ. ಮಾರ್ಗಸೂಚಿಗಳ ಪ್ರಕಾರ, ಲಾಕ್‌ಡೌನ್ ಜಾರಿಯಲ್ಲಿರುವಮೇ 3ರವರೆಗೆ ಕಚೇರಿಗೂ ಅನ್ವಯಿಸುವುದು. ಅಲ್ಲದೆ, ಉಪ ಕಾರ್ಯದರ್ಶಿ ಮಟ್ಟಕ್ಕಿಂತ ಮೇಲ್ಪಟ್ಟ ಅಧಿಕಾರಿಗಳು ಶೇ 100%ರಷ್ಟು ಮಂದಿ ಹಾಜರಿರಬೇಕು. ಕಿರಿಯ ಸಿಬ್ಬಂದಿಶೇ.33 ಮಂದಿ ಸಿಬ್ಬಂದಿ ಹಾಜರಿರಬೇಕು ಎಂದು ತಿಳಿಸಿದೆ.

ಮಾರ್ಗ ಸೂಚಿಯ ಪ್ರಕಾರಕಿರಿಯ ಸಿಬ್ಬಂದಿ ಈಗ ಲಾಕ್‌ಡೌನ್ ಅಡಿಯಲ್ಲಿ ಕೆಲಸ ಮಾಡಲು ಕಚೇರಿಗೆ ಬರುವ ಕುರಿತು ಕಳವಳ ವ್ಯಕ್ತಪಡಿಸಿದ್ದಾರೆ.ಕಚೇರಿಗೆ ಹಾಜರಾಗುವಾಗ ಎಲ್ಲರೂ ಒಟ್ಟಾಗಿಯೇ ಬರಬೇಕಾಗುತ್ತದೆ. ಆ ಸಮಯದಲ್ಲಿ ಅಂತರ ಕಾಯ್ದುಕೊಳ್ಳಲು ಸಾಧ್ಯವಾಗುವುದಿಲ್ಲ. ಇದು ಕೋವಿಡ್ 19 ನಿಯಮಪಾಲಿಸಲು ಸಾಧ್ಯವಾಗುವುದಿಲ್ಲ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.