ಲಖನೌ: ‘ದೇಶದ ಎಲ್ಲಾ ನಾಗರಿಕರಿಗೂ ಲಸಿಕೆ ಲಭ್ಯವಾಗಬೇಕು. ಇದಕ್ಕಾಗಿ ಲಸಿಕೆ ಹೆಸರಿನಲ್ಲಿ ನಡೆಯುತ್ತಿರುವ ರಾಜಕೀಯ ಅಂತ್ಯವಾಗಬೇಕು’ ಎಂದು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಅವರು ಮಂಗಳವಾರ ಆಗ್ರಹಿಸಿದ್ದಾರೆ.
‘ಈಗಾಗಲೇ ಲಸಿಕೆ ವಿಷಯದಲ್ಲಿ ಸಾಕಷ್ಟು ರಾಜಕೀಯ, ವಿವಾದಗಳು ನಡೆದಿವೆ. ಇದರಿಂದ ಜನರು ನೋವು ಅನುಭವಿಸಿದ್ದಾರೆ. ದೇಶದ ಎಲ್ಲಾ ನಾಗರಿಕರು ಲಸಿಕೆಯ ಲಾಭ ಪಡೆಯಬೇಕು. ಇದಕ್ಕಾಗಿ ಲಸಿಕೆ ಹೆಸರಿನಲ್ಲಿ ನಡೆಯುತ್ತಿರುವ ರಾಜಕೀಯ ಅಂತ್ಯವಾಗಬೇಕು’ ಎಂದು ಅವರು ಟ್ವೀಟ್ ಮಾಡಿದ್ದಾರೆ.
‘ಲಸಿಕೆ ಜತೆಗೆ ವಿಜ್ಞಾನಿಗಳು ಮತ್ತು ತಜ್ಞರಿಗೆ ಸರಿಯಾದ ಸಹಕಾರ, ಬೆಂಬಲ ನೀಡುವುದು ಅವಶ್ಯಕ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆರೋಗ್ಯ ಸೌಲಭ್ಯವನ್ನು ಇನ್ನಷ್ಟು ಬಲಿಷ್ಠಗೊಳಿಸಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.