ADVERTISEMENT

ನಾಳೆಯಿಂದ ಪ್ರಧಾನಿ ಮೋದಿ ವಿದೇಶ ಪ್ರವಾಸ: ಇಂಧನ ಕ್ಷೇತ್ರದ ಭದ್ರತೆ ಪ್ರಮುಖ ವಿಷಯ

ಇಂಧನ ಕ್ಷೇತ್ರದ ಭದ್ರತೆ ಪ್ರಮುಖ ವಿಷಯ

ಪಿಟಿಐ
Published 1 ಮೇ 2022, 10:31 IST
Last Updated 1 ಮೇ 2022, 10:31 IST
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ   

ನವದೆಹಲಿ: ಜರ್ಮನಿ, ಡೆನ್ಮಾರ್ಕ್ ಮತ್ತು ಫ್ರಾನ್ಸ್‌ಗೆ ಪ್ರಧಾನಿ ನರೇಂದ್ರ ಮೋದಿ ಅವರ ಮೂರು ದಿನಗಳ ಭೇಟಿಯ ಸಂದರ್ಭದಲ್ಲಿ ಇಂಧನ ಕ್ಷೇತ್ರದಲ್ಲಿ ಭದ್ರತೆ ಕುರಿತ ಚರ್ಚೆಯೇ ಪ್ರಮುಖ ವಿಷಯದಲ್ಲಿ ಒಂದಾಗಿದೆ ಎಂದು ವಿದೇಶಾಂಗ ಕಾರ್ಯದರ್ಶಿ ವಿನಯ್ ಮೋಹನ್ ಕ್ವಾತ್ರಾ ಭಾನುವಾರ ಹೇಳಿದ್ದಾರೆ.

ಸೋಮವಾರದಿಂದ ಈ ಮೂರು ದೇಶಗಳ ಪ್ರವಾಸವನ್ನು ಮೋದಿ ಆರಂಭಿಸಲಿದ್ದಾರೆ.

‘ಮೂರು ದೇಶಗಳ ಜೊತೆಗಿನ ಮಾತುಕತೆಯಲ್ಲಿ ಒಟ್ಟಾರೆ ಗಮನವು ದ್ವಿಪಕ್ಷೀಯ ಸಂಬಂಧ ವೃದ್ಧಿಸುವುದಾಗಿದೆ. ಉಕ್ರೇನ್‌ನಲ್ಲಿನ ಸದ್ಯದ ಪರಿಸ್ಥಿತಿ ಬಗ್ಗೆಯೂ ಮಾತುಕತೆ ನಡೆಯಬಹುದು’ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಪ್ರಸ್ತುತ ಭೌಗೋಳಿಕ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಇಂಧನ ಭದ್ರತೆಯು ಹೆಚ್ಚಿನ ಪ್ರಾಮುಖ್ಯತೆ ಪಡೆದುಕೊಂಡಿದೆ. ಯುರೋಪ್‌ ನಾಯಕರೊಂದಿಗಿನ ಮೋದಿಯವರ ಮಾತುಕತೆಯಲ್ಲಿ ಈ ವಿಷಯ ಮಹತ್ವದ್ದಾಗಿದೆ’ ಎಂದ ಅವರು, ಉಕ್ರೇನ್‌ನಲ್ಲಿನ ಸಂಘರ್ಷವನ್ನು ಮಾತುಕತೆ ಮೂಲಕ ಬಗೆಹರಿಸಬೇಕು ಎಂಬ ಭಾರತ ತನ್ನ ನಿಲುವಿಗೆ ಈಗಲೂ ಬದ್ಧ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.