ADVERTISEMENT

ನವದೆಹಲಿ: ಗಣರಾಜ್ಯೋತ್ಸವ ವೀಕ್ಷಣೆಗೆ ಟಿಕೆಟ್‌/ಆಹ್ವಾನ ಪತ್ರಿಕೆ ಕಡ್ಡಾಯ

ಪಿಟಿಐ
Published 23 ಜನವರಿ 2021, 7:08 IST
Last Updated 23 ಜನವರಿ 2021, 7:08 IST
ಗಣರಾಜ್ಯೋತ್ಸವ ಪರೇಡ್ (ಸಂಗ್ರಹ ಚಿತ್ರ)
ಗಣರಾಜ್ಯೋತ್ಸವ ಪರೇಡ್ (ಸಂಗ್ರಹ ಚಿತ್ರ)   

ನವದೆಹಲಿ: ನವದೆಹಲಿಯ ರಾಜ್‌ಪತ್‌ನಲ್ಲಿ ನಡೆಯುವ ಗಣರಾಜ್ಯೋತ್ಸವ ಕಾರ್ಯಕ್ರಮ ವೀಕ್ಷಣೆಗೆ ಟಿಕೆಟ್ ಅಥವಾ ಆಹ್ವಾನ ಪತ್ರಿಕೆ ಹೊಂದಿದ್ದವರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ಈ ವರ್ಷ ಗಣರಾಜ್ಯೋತ್ಸವ ಪರೇಡ್ ಮತ್ತು ಕಾರ್ಯಕ್ರಮ ವೀಕ್ಷಿಸಲು ಉಚಿತ ಪ್ರವೇಶಾವಕಾಶವಿಲ್ಲ. ಹಾಗೆಯೇ 15 ವರ್ಷದೊಳಗಿನವರಿಗೂ ಕಾರ್ಯಕ್ರಮ ವೀಕ್ಷಣೆಗೆ ಪ್ರವೇಶವಿಲ್ಲ. ಯಾರ ಬಳಿ ಟಿಕೆಟ್‌/ ಆಹ್ವಾನ ಪತ್ರಿಕೆ ಇಲ್ಲವೋ ಅಂಥವರು ಮನೆಯಲ್ಲೇ ಕುಳಿತು ಟಿವಿಯಲ್ಲಿ ನೇರ ಪ್ರಸಾರ ವೀಕ್ಷಿಸಬಹುದು‘ ಎಂದು ದೆಹಲಿ ಪೊಲೀಸರು ಟ್ವೀಟ್ ಮಾಡಿದ್ದಾರೆ.

‘ಆಹ್ವಾನ ಪತ್ರಿಕೆಯೊಂದಿಗೆ ಕಾರ್ಯಕ್ರಮಕ್ಕೆ ಬರುವವರು ಬ್ಯಾಗ್‌, ಸೂಟ್‌ಕೇಸ್‌, ಪಿನ್‌ಗಳು, ತಿನ್ನುವ ವಸ್ತುಗಳು, ಕ್ಯಾಮೆರಾ, ಬೈನಾಕ್ಯುಲರ್‌, ಶಸ್ತ್ರಾಸ್ತ್ರಗಳು, ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳಾದ ಐಪಾಡ್ಸ್‌, ಐಪೋಡ್ಸ್‌, ಪಾಮ್‌ ಟಾಪ್ ಕಂಪ್ಯೂಟರ್‌ಗಳು, ಲ್ಯಾಪ್‌ಟಾಪ್, ಕಂಪ್ಯೂಟರ್, ಟ್ಯಾಬಲೆಟ್‌ ಕಂಪ್ಯೂಟರ್‌, ಪವರ್ ಬ್ಯಾಂಗ್‌ ಮತ್ತು ಡಿಜಿಟಲ್ ಡೈರಿ ತರುವುದನ್ನು ನಿಷೇಧಿಸಲಾಗಿದೆ‘ ಎಂದು ಪೊಲೀಸರು ಟ್ವೀಟ್‌ನಲ್ಲಿ ಸೂಚಿಸಿದ್ದಾರೆ.

ADVERTISEMENT

ಆಹ್ವಾನಿತರು, ರಿಮೋಟ್‌ ಕಾರ್‌ ಕೀ, ಥರ್ಮೋ ಫ್ಲಾಸ್ಕ್‌, ನೀರಿನ ಶೀಶೆಗಳೂ, ಸಿಗಾರ್, ಬೀಡಿ, ಬೆಂಕಿಪೊಟ್ಟಣ, ಲೈಟರ್ಸ್‌, ಆಯುಧಗಳನ್ನು ತೆಗೆದುಕೊಂಡು ಹೋಗುವಂತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.