ADVERTISEMENT

Environment Day: ಈ ವರ್ಷ 10ಕೋಟಿ ಗಿಡ ನೆಡುವ ಗುರಿ: ಮಹಾರಾಷ್ಟ್ರ ಸಿಎಂ ಫಡಣವೀಸ್

ಪಿಟಿಐ
Published 5 ಜೂನ್ 2025, 5:10 IST
Last Updated 5 ಜೂನ್ 2025, 5:10 IST
<div class="paragraphs"><p>ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌</p></div>

ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌

   

ಮುಂಬೈ: ರಾಜ್ಯದಲ್ಲಿ ಹಸಿರು ಮತ್ತು ಸುಸ್ಥಿರ ಭವಿಷ್ಯವನ್ನು ಸೃಷ್ಟಿಸುವ ಉದ್ದೇಶದಿಂದ ಈ ವರ್ಷ 10 ಕೋಟಿ  ಗಿಡಗಳನ್ನು ನೆಡುವ ಗುರಿಯನ್ನು ಹೊಂದಿರುವುದಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಹೇಳಿದರು.

ವಿಶ್ವ ಪರಿಸರದ ದಿನದ ಅಂಗವಾಗಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ‘ಈ ವರ್ಷದಂತೆ ಮುಂದಿನ ವರ್ಷವೂ ಇದೇ ಗುರಿ ಮುಂದುವರಿಯಲಿದೆ. ಏಕೆಂದರೆ ಗಿಡ ನೆಡುವುದು ಕೇವಲ ಸಂಖ್ಯೆಗಾಗಿ ಅಲ್ಲ, ರಾಜ್ಯದಲ್ಲಿ ಹಸಿರು ಮತ್ತು ಸುಸ್ಥಿರ ಭವಿಷ್ಯವನ್ನು ನಿರ್ಮಾಣ ಮಾಡಲು. ಗಿಡ ನೆಡುವುದು ಜನಾಂದೋಲನವಾಗಬೇಕು’ ಎಂದು ಕರೆ ನೀಡಿದರು.

ADVERTISEMENT

ಪ್ರಧಾನಿ ನರೇಂದ್ರ ಮೋದಿಯವರ ‘ಅಮ್ಮನ ಹೆಸರಲ್ಲಿ ಒಂದು ಗಿಡ’ ಎನ್ನುವ ಉಪಕ್ರಮದಡಿ, ಮಹಾರಾಷ್ಟ್ರದಲ್ಲಿ ಇತ್ತೀಚಿನ ವರ್ಷಗಳಲ್ಲಿ 33 ರಿಂದ 50 ಕೋಟಿ ಗಿಡಗಳನ್ನು ನೆಡಲಾಗಿದೆ ಎಂದರು

1.5 ರಿಂದ 3 ವರ್ಷ ಗಿಡಗಳನ್ನು ನೆಡಬೇಕು, ಗಿಡಗಳ ಬದುಕುಳಿಯುವಿಕೆ ಮತ್ತು ದೀರ್ಘಕಾಲೀನ ಆರೈಕೆ ಬಗ್ಗೆ ನಿಗಾವಹಿಸಬೇಕು ಎಂದು ಎಂದು ಫಡಣವೀಸ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.