ADVERTISEMENT

ಈಕ್ವಟೋರಿಯಲ್ ಗಿನಿಯಾ: ಮಾರ್ಬರ್ಗ್ ವೈರಸ್‌ನ ಎಂಟು ಹೊಸ ಪ್ರಕರಣಗಳು ದೃಢ

ಏಜೆನ್ಸೀಸ್
Published 23 ಮಾರ್ಚ್ 2023, 14:19 IST
Last Updated 23 ಮಾರ್ಚ್ 2023, 14:19 IST
 .
 .   

ನೈರೋಬಿ: ಈಕ್ವಟೋರಿಯಲ್ ಗಿನಿಯಾದಲ್ಲಿ ಮಾರ್ಬರ್ಗ್ ವೈರಸ್ ಸೋಂಕಿನ ಹೊಸ ಎಂಟು ಪ್ರಕರಣಗಳು ದೃಢಪಟ್ಟಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವೈರಸ್‌ನ ಸೋಂಕಿನಿಂದಾಗಿ ಕಾಣಿಸಿಕೊಳ್ಳುವ ರಕ್ತಸ್ರಾವ ಹಾಗೂ ಜ್ವರಕ್ಕೆ ಯಾವುದೇ ಅಧಿಕೃತ ಲಸಿಕೆ ಅಥವಾ ಚಿಕಿತ್ಸೆ ಇಲ್ಲ ಎಂದೂ ಹೇಳಿದ್ದಾರೆ.

ಈಕ್ವಟೋರಿಯಲ್ ಗಿನಿಯಾದಲ್ಲಿ ಈ ವರೆಗೆ ಈ ಸೋಂಕಿನ ಒಟ್ಟು ಒಂಬತ್ತು ಪ್ರಕರಣಗಳು ವರದಿಯಾಗಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು (ಡಬ್ಲ್ಯುಎಚ್‌ಒ) ಗುರುವಾರ ಹೇಳಿದೆ.

ADVERTISEMENT

ತಾಂಜಾನಿಯಾದಲ್ಲಿ ಮಾರ್ಬರ್ಗ್ ವೈರಸ್‌ ಸೋಂಕಿನ ಎಂಟು ಪ್ರಕರಣಗಳು ದೃಢಪಟ್ಟಿವೆ ಎಂದು ಈಚೆಗೆ ಅಧಿಕಾರಿಗಳು ತಿಳಿಸಿದ್ದರು. ಸೋಂಕಿತರಲ್ಲಿ ಐವರು ಮೃತಪಟ್ಟಿದ್ದಾರೆ ಎಂದೂ ಹೇಳಿದ್ದಾರೆ.

ಹೊಸ ಪ್ರಕರಣಗಳು ಈಕ್ವಟೋರಿಯಲ್ ಗಿನಿಯಾದ ಕೀ ಎನ್ಟೆಮ್, ಲಿಟೋರಲ್ ಮತ್ತು ಸೆಂಟ್ರೊ ಸುರ್ ಪ್ರಾಂತ್ಯಗಳಲ್ಲಿ ದೃಢಪಟ್ಟಿವೆ ಎಂದು ಡಬ್ಲ್ಯುಎಚ್‌ಒ ಅಧಿಕಾರಿಗಳು ಹೇಳಿದ್ದಾರೆ.

‘ರೋಗ ಹರಡದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ’ ಎಂದೂ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.