ADVERTISEMENT

ಟರ್ಕಿ: ಮೇ 14ರಂದು ಸಂಸತ್‌ ಚುನಾವಣೆ

​ಪ್ರಜಾವಾಣಿ ವಾರ್ತೆ
Published 23 ಜನವರಿ 2023, 10:44 IST
Last Updated 23 ಜನವರಿ 2023, 10:44 IST
ರೆಸೆಪ್ ತಯ್ಯಿಪ್ ಎರ್ಡೊಗನ್‌
ರೆಸೆಪ್ ತಯ್ಯಿಪ್ ಎರ್ಡೊಗನ್‌   

ಇಸ್ತಾನ್‌ಬುಲ್(ಎ.ಪಿ): ಟರ್ಕಿ ದೇಶದ ಸಂಸತ್ತಿಗೆ ಹಾಗೂ ನೂತನ ಅಧ್ಯಕ್ಷರ ಆಯ್ಕೆಗೆ ಮೇ 14ರಂದು ಚುನಾವಣೆ ನಡೆಯಲಿದೆ ಎಂದು ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್‌ ಹೇಳಿದ್ದಾರೆ.

ಬುರ್ಸಾ ಪ್ರಾಂತ್ಯದಲ್ಲಿ ಶನಿವಾರ ನಡೆದ ಯುವಜನರ ಸಮ್ಮೇಳನದಲ್ಲಿ ಅವರು ಈ ಘೋಷಣೆ ಮಾಡಿದರು. ಇದರ ವಿಡಿಯೊ ಅನ್ನು ಭಾನುವಾರ ಬಿಡುಗಡೆ ಮಾಡಲಾಗಿದೆ. ಎರ್ಡೊಗನ್‌ ಅವರು ಮರು ಆಯ್ಕೆ ಬಯಸಿದ್ದಾರೆ.

‘ಮೇ 14ರ ಚುನಾವಣೆಯಲ್ಲಿ ಇದೇ ಪ್ರಥಮ ಬಾರಿಗೆ ಮತದಾನದ ಹಕ್ಕು ಚಲಾಯಿಸುವ ಯುವಶಕ್ತಿ ಜೊತೆಗೆ ಈ ವಿಷಯ ಹಂಚಿಕೊಳ್ಳುವ ಅವಕಾಶಕ್ಕಾಗಿ ದೇವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ’ ಎಂದು ಹೇಳಿದರು.

ADVERTISEMENT

ಮಾರ್ಚ್ 10ರಂದು ಈ ಕುರಿತು ಅಧಿಕೃತವಾಗಿ ಪ್ರಕಟಿಸಲಿದ್ದೇನೆ. ಆ ನಂತರ ಚುನಾವಣಾ ಮಂಡಳಿ ಸಿದ್ಧತೆ ಆರಂಭಿಸಲಿದೆ ಎಂದು ತಿಳಿಸಿದರು. ಯಾವುದೇ ಅಭ್ಯರ್ಥಿ ಶೇ 50ಕ್ಕಿಂತಲೂ ಹೆಚ್ಚುಮತ ಗಳಿಸದಿದ್ದಲ್ಲಿ ಎರಡನೇ ಸುತ್ತಿನ ಮತ ಎಣಿಕೆ ಪ್ರಕ್ರಿಯೆ ಮೇ 28ರಂದು ನಡೆಯಲಿದೆ. ಎರ್ಡೊಗನ್ 2003ರಿಂದ ಅಧಿಕಾರದಲ್ಲಿ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.