ADVERTISEMENT

ಎಐಸಿಸಿ ಖಜಾಂಚಿಯಾಗಿ ಪವನ್‌ ಕುಮಾರ್‌ ಬನ್ಸಾಲ್‌

ಪಿಟಿಐ
Published 28 ನವೆಂಬರ್ 2020, 11:14 IST
Last Updated 28 ನವೆಂಬರ್ 2020, 11:14 IST
ಸೋನಿಯಾ ಗಾಂಧಿ
ಸೋನಿಯಾ ಗಾಂಧಿ   

ನವದೆಹಲಿ: ಪಕ್ಷದ ಖಜಾಂಚಿಯಾಗಿ ಕೇಂದ್ರದ ಮಾಜಿ ಸಚಿವ ಪವನ್‌ ಕುಮಾರ್‌ ಬನ್ಸಾಲ್‌ ಅವರನ್ನು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಶನಿವಾರ ನೇಮಕ ಮಾಡಿದ್ದಾರೆ.

ಅಹ್ಮದ್‌ ಪಟೇಲ್‌ ಅವರ ನಿಧನದಿಂದಾಗಿ ಈ ಸ್ಥಾನ ತೆರವಾಗಿತ್ತು. ಅಖಿಲ ಭಾರತ ಕಾಂಗ್ರೆಸ್‌ ಸಮಿತಿ(ಎಐಸಿಸಿ) ಆಡಳಿತದ ಹೊಣೆ ಹೊತ್ತಿರುವ ಬನ್ಸಾಲ್‌ ಅವರು, ಮಧ್ಯಂತರ ಕ್ರಮವಾಗಿ ತಕ್ಷಣದಿಂದ ಜಾರಿಯಾಗುವಂತೆ ಹೆಚ್ಚುವರಿಯಾಗಿ ಈ ಹುದ್ದೆಯನ್ನು ವಹಿಸಲಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ಅವರು ಪ್ರಕಟಣೆಯಲ್ಲಿ ಉಲ್ಲೇಖಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT