ADVERTISEMENT

ಠಾಣೆಗೆ ಬೆಂಕಿ ಹಚ್ಚುವುದಾಗಿ ಬೆದರಿಕೆ ಹಾಕಿದ್ದ ಮಾಜಿ ಎಂಎಲ್ಎಗೆ 3 ವರ್ಷ ಜೈಲು

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2019, 7:21 IST
Last Updated 1 ಡಿಸೆಂಬರ್ 2019, 7:21 IST
   

ಭೋಪಾಲ್: ಪೊಲೀಸ್ ಠಾಣೆಗೆ ಬೆಂಕಿ ಇಡುವುದಾಗಿ ಬೆದರಿಕೆಯೊಡ್ಡಿದ್ದ ಮಾಜಿ ಶಾಸಕಿ ಹಾಗೂ ಅವರ ಏಳು ಮಂದಿ ಹಿಂಬಾಲಕರಿಗೆ ಇಲ್ಲಿನ ನ್ಯಾಯಾಲಯ ಮೂರು ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಇಲ್ಲಿನ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸುರೇಶ್ ಸಿಂಗ್ ಶನಿವಾರ ತೀರ್ಪು ನೀಡಿದ್ದು, ಕಾಂಗ್ರೆಸ್‌‌ ಮುಖಂಡರು ಹಾಗೂ ಮಧ್ಯಪ್ರದೇಶದ ಕರೇರಾ ಕ್ಷೇತ್ರದಮಾಜಿ ಶಾಸಕಿ ಶಕುಂತಲಾ ಕಾಟಕಿ ಅವರಿಗೆ ₹5 ಸಾವಿರ ದಂಡ ಮೂರು ವರ್ಷ ಜೈಲು ಶಿಕ್ಷೆವಿಧಿಸಿ ತೀರ್ಪು ನೀಡಲಾಗಿದೆ.

ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಒಂದು ತಿಂಗಳ ಕಾಲಾವಕಾಶವನ್ನೂ ನ್ಯಾಯಾಲಯ ನೀಡಿದೆ. 2017ರಲ್ಲಿ ಪೊಲೀಸರು ಪ್ರತಿಭಟನಾ ನಿರತ ರೈತರ ಮೇಲೆ ಗುಂಡಿನ ದಾಳಿ ನಡೆಸುವುದರ ವಿರುದ್ಧ ಸಿಡಿದೆದ್ದ ಮಾಜಿ ಶಾಸಕಿ ಪೊಲೀಸ್ ಠಾಣೆಗೆ ಬೆಂಕಿ ಹಚ್ಚುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿತ್ತು.

ADVERTISEMENT

ವಿನಾಸ್ ಗೋಯಲ್, ದೀಪಕ್ ಸೇಠ್, ನಾರಾಯಣ, ಬಂಟಿ ಅಲಿಯಾಸ್ ಸಂಜಯ್, ಸತೀಶ್ ವರ್ಮ, ಮನೀಶ್ ಕಾಟಿಕ್ ಶಿಕ್ಷೆಗೆ ಒಳಪಟ್ಟವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.