ADVERTISEMENT

ರೈತರ ಉತ್ಪನ್ನ ಮಾರಾಟ, ಲಾರಿಗಳ ಓಡಾಟಕ್ಕೆ ಅನುಮತಿ: ಕೇಂದ್ರ ಕೃಷಿ ಸಚಿವ

ಏಜೆನ್ಸೀಸ್
Published 8 ಏಪ್ರಿಲ್ 2020, 8:46 IST
Last Updated 8 ಏಪ್ರಿಲ್ 2020, 8:46 IST
 ಕೇಂದ್ರ  ಕೃಷಿ ಸಚಿವಾಲಯದಿಂದ ರೈತರ ಉತ್ಪನ್ನಗಳ ಮಾರಾಟಕ್ಕೆ ಲಾರಿ ಓಡಾಟಕ್ಕೆ ಅನುಮತಿ
ಕೇಂದ್ರ ಕೃಷಿ ಸಚಿವಾಲಯದಿಂದ ರೈತರ ಉತ್ಪನ್ನಗಳ ಮಾರಾಟಕ್ಕೆ ಲಾರಿ ಓಡಾಟಕ್ಕೆ ಅನುಮತಿ   

ನವದೆಹಲಿ: ದೇಶದಲ್ಲಿ ರೈತರ ಉತ್ಪನ್ನಗಳನ್ನು ರಾಜ್ಯದಿಂದ ರಾಜ್ಯಕ್ಕೆ, ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಮಾರಾಟ ಮಾಡಲು ಲಾಕ್‌ಡೌನ್‌‌ನಿಂದಮುಕ್ತ ಅವಕಾಶ ನೀಡಲಾಗಿದೆಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ತೊಮರ್ ತಿಳಿಸಿದ್ದಾರೆ.

ಬುಧವಾರ ರಾಷ್ಟ್ರದ ಎಲ್ಲಾ ಅಧಿಕಾರಿಗಳ ಜೊತೆ ವಿಡಿಯೋ ಸಂವಾದ ನಡೆಸಿದ ಸಂದರ್ಭದಲ್ಲಿ ಈ ವಿಷಯ ತಿಳಿಸಿದರು.ಲಾಕ್ ಡೌನ್ ಸಂದರ್ಭದಲ್ಲಿ ರೈತರು ಹಾಗೂ ರೈತ ಉತ್ಪನ್ನಗಳ ವಿತರಣೆಗಾಗಿ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬುದರ ಕುರಿತು ಸಚಿವರುಮಾಹಿತಿ ಸಂಗ್ರಹಿಸಿದ್ದಾರೆ.

ರೈತರು ಬೆಳೆದ ತರಕಾರಿ ಸೇರಿದಂತೆ ಎಲ್ಲಾ ಉತ್ಪನ್ನಗಳನ್ನು ತಮ್ಮ ಮನೆಗಳ ಮುಂದೆ ಮಾರಾಟ ಮಾಡಲು ಯತ್ನಿಸಬೇಕು ಎಂದು ತಿಳಿಸಿದ ತೊಮರ್, ರೈತರಿಗೆ ಲಾಕ್‌‌ಡೌನ್ ಸಂದರ್ಭದಲ್ಲಿ ಯಾವ ರೀತಿಯ ಸಹಾಯ ಮಾಡಲಾಗಿದೆ ಎಂದು ಪರಿಶೀಲನೆ ನಡೆಸಿದರು. ಅಲ್ಲದೆ, ರೈತರು ಹಾಗೂ ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದ ಸಮಸ್ಯೆಗಳ ಪರಿಹಾರಕ್ಕಾಗಿ ನಿಯಂತ್ರಣಕೊಠಡಿ (ಕಂಟ್ರೋಲ್ ರೂಂ) ತೆರೆಯುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.