ಶಸ್ತ್ರಚಿಕಿತ್ಸೆ
(ಸಾಂದರ್ಭಿಕ ಚಿತ್ರ
ಠಾಣೆ: ನವಿ ಮುಂಬೈನ ಕಣ್ಣಿನ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾದ ಐವರಿಗೆ ಗಂಭೀರ ಸೋಂಕು ತಗುಲಿದ ಬೆನ್ನಲ್ಲೇ ಇಬ್ಬರು ವೈದ್ಯರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಬುಧವಾರ ಹೇಳಿದ್ದಾರೆ.
ನವಿ ಮುಂಬೈನ ವಶಿ ಎಂಬಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಸೋಂಕಿತರು 2024ರ ಡಿಸೆಂಬರ್‌ನಿಂದ 2025ರ ಮಾರ್ಚ್ ಅವಧಿಯಲ್ಲಿ ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.
‘ಆರೋಪಿತ ವೈದ್ಯರು ದುಡುಕಿನ, ಆತುರದ ಹಾಗೂ ನಿರ್ಲಕ್ಷ್ಯ ರೀತಿಯಲ್ಲಿ ಶಸ್ತ್ರಚಿಕಿತ್ಸೆ ನಡೆಸಿದ್ದರು. ಇದರಿಂದಾಗಿ 65 ವರ್ಷ ಮೇಲ್ಪಟ್ಟ ಇಬ್ಬರನ್ನು ಒಳಗೊಂಡು ಒಟ್ಟು ಐವರು ರೋಗಿಗಳಿಗೆ ತೀವ್ರ ರೀತಿಯಲ್ಲಿ ಕಣ್ಣಿನ ಸೋಂಕು ಉಂಟಾಗಿತ್ತು. ಶಸ್ತ್ರಚಿಕಿತ್ಸೆ ನಂತರ ಸುಡೊಮೊನಾಸ್ ಎಂಬ ವೈರಾಣುವಿನಿಂದ ಈ ಸೋಂಕು ತಗುಲಿದೆ’ ಎಂದು ವಶಿ ಠಾಣೆ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
‘ಈ ವೈದ್ಯರು ತಮ್ಮ ಪರವಾನಗಿಯನ್ನು ಮಹಾರಾಷ್ಟ್ರ ವೈದ್ಯಕೀಯ ಮಂಡಳಿಯಿಂದ ನವೀಕರಿಸಿರಲಿಲ್ಲ. ಇವರ ವಿರುದ್ಧ ಸೋಂಕಿತರು ದೂರು ನೀಡಿದ್ದರು. ಸಿವಿಲ್ ಶಸ್ತ್ರಚಿಕಿತ್ಸಕರು ತನಿಖೆ ನಡೆಸಿ ಸಲ್ಲಿಸಿದ ವರದಿ ಆಧರಿಸಿ ಭಾರತೀಯ ನ್ಯಾಯ ಸಂಹಿತಾ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈವರೆಗೂ ಯಾರನ್ನೂ ಬಂಧಿಸಿಲ್ಲ. ತನಿಖೆ ಪ್ರಗತಿಯಲ್ಲಿದೆ’ ಎಂದು ಪೊಲೀಸರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.