ADVERTISEMENT

ಮಹಾರಾಷ್ಟ್ರ: ಸಚಿವ ಧನಂಜಯ ಮುಂಡೆ ರಾಜೀನಾಮೆ ಕೇಳಿದ ಸಿಎಂ ಫಡಣವೀಸ್‌

ಪಿಟಿಐ
Published 4 ಮಾರ್ಚ್ 2025, 4:41 IST
Last Updated 4 ಮಾರ್ಚ್ 2025, 4:41 IST
<div class="paragraphs"><p>ಧನಂಜಯ ಮುಂಡೆ ಮತ್ತು&nbsp;ಫಡಣವೀಸ್‌</p></div>

ಧನಂಜಯ ಮುಂಡೆ ಮತ್ತು ಫಡಣವೀಸ್‌

   

ಮುಂಬೈ(ಮಹಾರಾಷ್ಟ್ರ): ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಸಚಿವ ಧನಂಜಯ ಮುಂಡೆ ಅವರಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಕೇಳಿದ್ದಾರೆ ಎಂದು ಮೂಲಗಳು ಮಂಗಳವಾರ ತಿಳಿಸಿವೆ.

ಎನ್‌ಸಿಪಿಯ ಅಜಿತ್‌ ಪವಾರ್‌ ಬಣದ ನಾಯಕರಾಗಿರುವ ಧನಂಜಯ ಅವರು ಪ್ರಸ್ತುತ ಮಹಾರಾಷ್ಟ್ರದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾಗಿದ್ದಾರೆ.

ADVERTISEMENT

ಧನಂಜಯ ಅವರ ಆಪ್ತ ವಾಲ್ಮಿಕ್‌ ಕರಾಡ್‌ನನ್ನು ಸಂತೋಷ್‌ ದೇಶ್‌ಮುಖ್‌ ಹತ್ಯೆ ಪ್ರಕರಣದ ಪ್ರಮುಖ ಸಂಚುಕೋರ ಎಂದು ಉಲ್ಲೇಖಿಸಿ ಸಿಐಡಿ ದೋಷಾರೋಪ ಪಟ್ಟಿ ಸಲ್ಲಿಸಿದ ಬೆನ್ನಲ್ಲೇ ಧನಂಜಯ ಮುಂಡೆ ಅವರ ರಾಜೀನಾಮೆಗೆ ವಿಪಕ್ಷಗಳು ಆಗ್ರಹಿಸಿವೆ.

ಬೀಡ್‌ನ ಮಸ್ಸಾಜೋಗ್ ಗ್ರಾಮದ ಸರಪಂಚ್‌ ಆಗಿದ್ದ ಸಂತೋಷ್ ದೇಶಮುಖ್‌ ಅವರನ್ನು ಕಳೆದ ವರ್ಷ ಡಿಸೆಂಬರ್ 6ರಂದು ಅಪಹರಿಸಿ ಚಿತ್ರಹಿಂಸೆ ನೀಡಿ ಕೊಲೆ ಮಾಡಲಾಗಿತ್ತು.

ಪ್ರಕರಣ ಸಂಬಂಧ ಬೀಡ್‌ ಜಿಲ್ಲಾ ನ್ಯಾಯಾಲಯಕ್ಕೆ 1,200 ಪುಟಗಳ ದೋಷಾರೋಪಪಟ್ಟಿ ಸಲ್ಲಿಸಿದ್ದ ಸಿಐಡಿ, ವಾಲ್ಮಿಕ್‌ ಕರಾಡ್‌ನನ್ನು ಪ್ರಮುಖ ಆರೋಪಿ ಎಂದು ಹೆಸರಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.