ADVERTISEMENT

ಮಹಾರಾಷ್ಟ್ರದ ಮುಖ್ಯಮಂತ್ರಿ ಫಡಣವಿಸ್ ರಾಜೀನಾಮೆ ನೀಡಲಿ: ಶರದ್ ಪವಾರ್

ಪಿಟಿಐ
Published 1 ಮೇ 2019, 13:29 IST
Last Updated 1 ಮೇ 2019, 13:29 IST
   

ಮುಂಬೈ: ಗಡ್‌ಚಿರೋಲಿಯಲ್ಲಿ ನಕ್ಸಲರು ಐಇಡಿ ಸ್ಫೋಟಿಸಿ 15 ಪೊಲೀಸ್ ಮತ್ತು ಒಬ್ಬ ನಾಗರೀಕ ಹತ್ಯೆಯಾದ ಪ್ರಕರಣದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವಿಸ್ ರಾಜೀನಾಮೆ ನೀಡಲಿ ಎಂದು ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಒತ್ತಾಯಿಸಿದ್ದಾರೆ.

ಫಡಣವಿಸ್ ಅವರು ಗೃಹ ಇಲಾಖೆಯ ಜವಾಬ್ದಾರಿಯನ್ನೂ ಹೊತ್ತು ಕೊಂಡಿರುವುದರಿಂದ ಅವರು ಈ ಕೂಡಲೇ ರಾಜೀನಾಮೆ ನೀಡಬೇಕೆಂದು ಪವಾರ್ ಟ್ವೀಟ್ ಮಾಡಿದ್ದಾರೆ.

ನಿಮಗೆ ಮನಃಸಾಕ್ಷಿ ಇದ್ದರೆ ನೀವು ರಾಜೀನಾಮೆ ನೀಡಬೇಕು. ಆದರೆ ಈಗ ಅಧಿಕಾರದಲ್ಲಿ ಇರುವವರು ಈ ರೀತಿ ಮಾಡುವುದಿಲ್ಲ.

ADVERTISEMENT

ರಾಜ್ಯದಲ್ಲಿ ನಕ್ಸಲ್ ಚಟುವಟಿಕೆಗಳು ಹೆಚ್ಚುತ್ತಿವೆ.ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಕಾನೂನು ಕ್ರಮ ಕೈಗೊಳ್ಳುವುದರ ಬಗ್ಗೆ ಅಧಿಕಾರ ಹೊಂದಿದವರ ನಿರ್ಲಕ್ಷ್ಯ ಧೋರಣೆಯೇ ಇದಕ್ಕೆ ಕಾರಣ. ಹಾಗಾಗಿ ದಾಳಿಯನ್ನು ಖಂಡಿಸಿ, ಹುತಾತ್ಮರಿಗೆ ಸಂತಾಪ ಸೂಚಿಸುವುದನ್ನು ಬಿಟ್ಟರೆ ಬೇರೇನೂ ಮಾಡಲು ಸಾಧ್ಯವಾಗುವುದಿಲ್ಲ ಎಂದು ಪವಾರ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.