ADVERTISEMENT

ಫರೀದಾಬಾದ್ | ಮಹಿಳಾ ಶೂಟರ್ ಮೇಲೆ ಅತ್ಯಾಚಾರ: ಮೂವರ ಬಂಧನ

ಪಿಟಿಐ
Published 19 ಡಿಸೆಂಬರ್ 2025, 15:33 IST
Last Updated 19 ಡಿಸೆಂಬರ್ 2025, 15:33 IST
<div class="paragraphs"><p>ಅತ್ಯಾಚಾರ</p></div>

ಅತ್ಯಾಚಾರ

   

ಸಾಂದರ್ಭಿಕ ಚಿತ್ರ

ಫರೀದಾಬಾದ್: ಹೋಟೆಲ್‌ನಲ್ಲಿ 23 ವರ್ಷದ ಮಹಿಳಾ ಶೂಟರ್ ಮೇಲೆ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ. ಸಾರೈ ಖವಾಜಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ADVERTISEMENT

ಮಹಿಳಾ ಶೂಟರ್ ಮಂಗಳವಾರ ತನ್ನ ಸ್ನೇಹಿತನೊಂದಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಫರೀದಾಬಾದ್‌ಗೆ ಬಂದಿದ್ದರು. ಬುಧವಾರ ಸಂಜೆ, ಸ್ಪರ್ಧೆಯ ನಂತರ ಗೌರವ್ ಎಂಬಾತ ತನ್ನ ಸ್ನೇಹಿತ ಸತೇಂದ್ರ ಎಂಬವನ ಜೊತೆ ಬಂದ. ನಂತರ ನಾಲ್ವರೂ ಫರೀದಾಬಾದ್‌ನಲ್ಲಿಯೇ ಉಳಿದು ಮರುದಿನ ಹೊರಡಲು ನಿರ್ಧರಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳಾದ ಸತೇಂದ್ರ, ಗೌರವ್ ಮತ್ತು ಶೂಟರ್‌ನ ಸ್ನೇಹಿತೆಯನ್ನು ಹೋಟೆಲ್‍ನಲ್ಲಿಯೇ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಂತರ ಅವರು ಹೋಟೆಲ್‌ನಲ್ಲಿ ಎರಡು ಕೊಠಡಿಗಳನ್ನು ಬುಕ್ ಮಾಡಿ, ಒಂದು ಕೋಣೆಯಲ್ಲಿ ಔತಣಕೂಟದಲ್ಲಿ ಪಾಲ್ಗೊಂಡರು. ಅದಾದ ಮೇಲೆ ಸುಮಾರು ರಾತ್ರಿ 9 ಗಂಟೆಗೆ ತನ್ನ ಸ್ನೇಹಿತೆ ಮತ್ತು ಗೌರವ್ ಕೆಲವು ವಸ್ತುಗಳನ್ನು ತರಲು ಕೆಳಗೆ ಹೋದರು. ಆಗ ಕೋಣೆಯಲ್ಲಿದ್ದ ಸತೇಂದ್ರ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಶೂಟರ್ ಆರೋಪಿಸಿದ್ದಾರೆ.

‘ಸ್ನೇಹಿತೆ ಹಿಂತಿರುಗಿದ ನಂತರ. ಆರೋಪಿಯನ್ನು ಕೋಣೆಯೊಳಗೆ ಬೀಗ ಹಾಕಿ ಪೊಲೀಸರನ್ನು ಸಂಪರ್ಕಿಸಿದೆ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.