ADVERTISEMENT

ಕೃಷಿ ಮಸೂದೆ ರೈತರಿಗೆ ಮರಣ ಶಾಸನ: ರಾಹುಲ್ ಗಾಂಧಿ ಟೀಕೆ

ಪಿಟಿಐ
Published 28 ಸೆಪ್ಟೆಂಬರ್ 2020, 10:22 IST
Last Updated 28 ಸೆಪ್ಟೆಂಬರ್ 2020, 10:22 IST
ರಾಹುಲ್ ಗಾಂಧಿ
ರಾಹುಲ್ ಗಾಂಧಿ   

ನವದೆಹಲಿ: ಕೃಷಿ ಸಂಬಂಧಿ ಮಸೂದೆಗಳು ರೈತರಿಗೆ ಮರಣ ಶಾಸನವಾಗಿವೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್‌ಗಾಂಧಿ ಟ್ವೀಟ್ ಮಾಡಿದ್ದಾರೆ.

‘ಸದನದ ಒಳಗೆ ಮತ್ತು ಹೊರಗೆಕೃಷಿ ಮಸೂದೆಗಳನ್ನು ವಿರೋಧಿಸುವವರ ಧ್ವನಿಯನ್ನು ಹತ್ತಿಕ್ಕಲಾಗುತ್ತಿದ್ದು, ಇದು ಭಾರತದಲ್ಲಿ ಪ್ರಜಾಪ್ರಭುತ್ವ ಸತ್ತು ಹೋಗಿದೆ ಎಂಬುದಕ್ಕೆ ಸಾಕ್ಷಿ’ ಎಂದು ಅವರು ಆರೋಪಿಸಿದ್ದಾರೆ.

‘ರಾಜ್ಯಸಭೆಯಲ್ಲಿ ಕೃಷಿ ಮಸೂದೆಗಳಿಗೆ ಅನುಮೋದನೆ ನೀಡುವಾಗ ವಿರೋಧ ಪಕ್ಷಗಳು ಮಸೂದೆಗಳನ್ನು ಮತಕ್ಕೆ ಹಾಕಿ ಎಂದು ಒತ್ತಾಯಿಸಿದವು. ಆ ವೇಳೆ ಅವರೆಲ್ಲ ತಮ್ಮ ಸ್ಥಾನಗಳಲ್ಲೇ ಕುಳಿತಿದ್ದರು. ಆದರೆ, ಸರ್ಕಾರ ವಿರೋಧ ಪಕ್ಷದವರು ತಮ್ಮ ಸ್ಥಾನಗಳಲ್ಲಿರಲಿಲ್ಲ ಎಂದು ಹೇಳಿದೆ‘ ಎಂದು ದೂರಿರುವ ರಾಹುಲ್‌ ಗಾಂಧಿ, ಸರ್ಕಾರದ ಹೇಳಿಕೆಯಿರುವ ಸುದ್ದಿಯ ತುಣಕನ್ನು ಟ್ವೀಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.