ADVERTISEMENT

ಪಂಜಾಬ್‌ ಪ್ರತಿಭಟನೆ ವೇಳೆ ಟ್ರ್ಯಾಕ್ಟರ್‌ ಹರಿದು ರೈತ ಸಾವು, ಐವರು ಪೊಲೀಸರಿಗೆ ಗಾಯ

ಪಿಟಿಐ
Published 22 ಆಗಸ್ಟ್ 2023, 3:31 IST
Last Updated 22 ಆಗಸ್ಟ್ 2023, 3:31 IST
ರೈತ ಸಾವು
ರೈತ ಸಾವು   

ಚಂಡೀಗಢ: ಸಂಗ್ರೂರ್‌ ಜಿಲ್ಲೆಯಲ್ಲಿ ನಡೆದ ಪ್ರತಿಭಟನೆ ವೇಳೆ ಟ್ರ್ಯಾಕ್ಟರ್‌ ಟ್ರಾಲಿ ಹರಿದು ರೈತನೊಬ್ಬ ಮೃತಪಟ್ಟಿದ್ದು ಕನಿಷ್ಠ ಐವರು ಪೊಲೀಸರು ಗಾಯಗೊಂಡ ಘಟನೆ ಸೋಮವಾರ ನಡೆದಿದೆ. 

ಜಿಲ್ಲೆಯ ಲಾಂಗೋವಾಲ್ ಪ್ರದೇಶದಲ್ಲಿ ‘ಭೂಮಿ ಉಳಿಸಿ’ ಅಭಿಯಾನದಡಿ ಪ್ರವಾಹದಿಂದ ಉಂಟಾದ ನಷ್ಟಕ್ಕೆ ಪರಿಹಾರ ಕೇಳಲು 16ಕ್ಕೂ ಹೆಚ್ಚು ರೈತ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದವು. 

ಮೃತ ರೈತನನ್ನು ಲಾಂಗೋವಾಲ್ ಪ್ರದೇಶದ ಪ್ರೀತಮ್ ಸಿಂಗ್ ಎಂದು ಗುರುತಿಸಲಾಗಿದೆ

ADVERTISEMENT

ಪ್ರತಿಭಟನೆ ವೇಳೆ ರೈತರು ರಾಷ್ಟ್ರೀಯ ಹೆದ್ದಾರಿ ಮತ್ತು ಟೋಲ್‌ ಪ್ಲಾಜಾಗಳಿಗೆ ನಿರ್ಬಂಧ ವಿಧಿಸುವುದನ್ನು ತಡೆಯಲು ಪೊಲೀಸರು ಯತ್ನಿಸಿದ್ದರು. ಆದರೂ ಬ್ಯಾರಿಕೇಡ್‌ಗಳ ಮೇಲೆಯೇ ಟ್ರ್ಯಾಕ್ಟರ್-ಟ್ರಾಲಿಗಳು ಮತ್ತು ಬಸ್‌ಗಳನ್ನು ಚಲಾಯಿಸಿದ್ದಾರೆ. ಇದರಿಂದ ದುರಂತ ಸಂಭವಿಸಿದೆ ಎಂದು ಪೊಲೀಸರು ಹೇಳಿದ್ದಾರೆ.

ಕೆಲವು ಟ್ರ್ಯಾಕ್ಟರ್‌ ಮತ್ತು ಬಸ್‌ ಡ್ರೈವರ್‌ಗಳ ಬೇಜಾವಾಬ್ದಾರಿಯಿಂದಾಗಿ ಈ ಘಟನೆ ನಡೆದಿದೆ. ಈಗ ಪರಿಸ್ಥಿತಿಯನ್ನು ಹತೋಟಿಗೆ ತರಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್‌ ಬಂದೋಬಸ್ತ್‌ ಒದಗಿಸಲಾಗಿದೆ ಎಂದು ಪಂಜಾಬ್‌ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.