ನವದೆಹಲಿ: ‘ನಿಮ್ಮ ಹೃದಯ ಹಾಗೂ ಮನಸ್ಸಿನಲ್ಲಿಯೂ ರೈತರಿದ್ದಾರೆ. ನಾನು ಕೂಡ ರೈತರ ಸಮಸ್ಯೆಗಳ ಬಗ್ಗೆ ಗಮನ ಹರಿಸಲು ಪ್ರಯತ್ನ ಪಡುತ್ತೇನೆ’ಎಂದು ದೇವೇಗೌಡರ ಭೇಟಿ ವೇಳೆ ಉಪರಾಷ್ಟ್ರಪತಿ ಜಗದೀಪ್ ಧನಕರ್ ಹೇಳಿದ್ದಾರೆ.
ಮಂಗಳವಾರ ಮಾಜಿ ಪ್ರಧಾನಿ ದೇವೇಗೌಡರ ಹುಟ್ಟುಹಬ್ಬಕ್ಕೆ ಶುಭಕೋರಲು ತೆರಳಿದ ಸಂದರ್ಭದಲ್ಲಿ ಅವರ ಜೊತೆ ಮಾತುಕತೆ ನಡೆಸಿದರು.
ಪರೋಕ್ಷ ಸಬ್ಸಿಡಿಗಳಲ್ಲಿ ಹಲವು ಲೋಪದೋಷಗಳಿವೆ, ಇದರಿಂದ ನಿಗದಿತ ಗುರಿ ತಲುಪಲು ಸಾಧ್ಯವಿಲ್ಲ. ಸಬ್ಸಿಡಿಯ ಮೊತ್ತವು ನೇರವಾಗಿ ತಲುಪುವ ಮೂಲಕ ರೈತರ ಜೀವನ ಬದಲಾಗಲಿದೆ ಎಂದರು.
ರಾಷ್ಟ್ರದ ಹಿತ, ಆರ್ಥಿಕ ಸದೃಢತೆ, ರಾಜಕೀಯ ಸ್ಥಿರತೆ, ಸಾಮಾಜಿಕ ವ್ಯವಸ್ಥೆಯನ್ನು ಬಲಪಡಿಸುವ ದೃಷ್ಠಿಯಿಂದ ರೈತರ ಪಾತ್ರವು ಮಹತ್ವದ್ದಾಗಿದೆ. ಹಾಗಾಗಿ ನಾನು ರೈತರ ಸಮಸ್ಯೆಗಳ ಬಗ್ಗೆ ಮಾತನಾಡುತ್ತಿದ್ದೇನೆ ಎಂದು ಹೇಳಿದರು.
ಕೃಷಿ ವಲಯಕ್ಕೆ ಸಿಗುವ ಯಾವುದೇ ರೀತಿಯ ಸಬ್ಸಿಡಿಯು, ನೇರವಾಗಿ ರೈತರಿಗೆ ತಲುಪಬೇಕು ಎಂದು ಈ ಹಿಂದೆಯೂ ಹೇಳಿದ್ದರು.
ಜನರ ಸೇವೆಗಾಗಿ ನಾನು ನಿಮ್ಮ ಆಶೀರ್ವಾದ ಪಡೆಯುತ್ತೇನೆ ಎಂದು ಧನಕರ್ ಅವರು ಮಾಜಿ ಪ್ರಧಾನಿ ದೇವೇಗೌಡರ ಆಶೀರ್ವಾದ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.