ADVERTISEMENT

ಗುಜರಾತ್‌: ಸ್ಮಾರ್ಟ್‌ಫೋನ್‌ ಕೊಳ್ಳಲು ರೈತರಿಗೆ ₹ 1500 ಆರ್ಥಿಕ ನೆರವು 

ಪಿಟಿಐ
Published 21 ನವೆಂಬರ್ 2021, 9:39 IST
Last Updated 21 ನವೆಂಬರ್ 2021, 9:39 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಅಹಮದಾಬಾದ್, ಗುಜರಾಜ್‌: ರಾಜ್ಯದಲ್ಲಿನ ರೈತರು ಸ್ಮಾರ್ಟ್‌ಫೋನ್‌ ಖರೀದಿಸಲು ಗುಜರಾತ್‌ ಸರ್ಕಾರವು ₹1,500 ವರೆಗಿನ ಆರ್ಥಿಕ ನೆರವು ಕಲ್ಪಿಸಲು ನಿರ್ಧರಿಸಿದೆ ಎಂದು ರಾಜ್ಯದ ಕೃಷಿ ಇಲಾಖೆಯು ಹೊರಡಿಸಿದ ಅಧಿಸೂಚನೆ ತಿಳಿಸಿದೆ.

ಕೃಷಿ ಕ್ಷೇತ್ರದಲ್ಲಿ ಡಿಜಿಟಲ್‌ ಸೇವೆಗಳ ಪ್ರಭುತ್ವ ಬೆಳೆಯುತ್ತಿರುವ ಈ ಸಮಯದಲ್ಲಿ ತಮ್ಮ ಕೃಷಿ ಆದಾಯವನ್ನು ಹೆಚ್ಚಿಸಲು ವಿವಿಧ ಉದ್ದೇಶಗಳ ಬಳಕೆಗೆ ಸ್ಮಾರ್ಟ್‌ಫೋನ್‌ ಖರೀದಿಸುವಂತೆ ರೈತರನ್ನು ಉತ್ತೇಜಿಸುವುದು ಈ ಯೋಜನೆಯ ಉದ್ದೇಶವಾಗಿದೆ ಎಂದು ಅಧಿಸೂಚನೆ ಹೇಳಿದೆ.

ಗುಜರಾತ್‌ನಲ್ಲಿ ಭೂಮಿಯನ್ನು ಹೊಂದಿರುವ ಯಾವುದೇ ರೈತರು ಈ ಯೋಜನೆಯ ಪ್ರಯೋಜನ ಪಡೆಯಲು ಸ್ಮಾರ್ಟ್‌ಫೋನ್‌ ಒಟ್ಟು ಮೊತ್ತದ ಶೇ 10 ಭಾಗ ಅಂದರೆ ₹1,500 ಸಹಾಯ ಪಡೆಯಲು ಐ–ಖೆದುತ್‌ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಬಹುದು ಎಂದು ರಾಜ್ಯ ಕೃಷಿ, ರೈತರ ಕಲ್ಯಾಣ ಮತ್ತು ಸಹಕಾರ ಇಲಾಖೆ ಶನಿವಾರ ಹೊರಡಿಸಿದ ಸರ್ಕಾರದ ನಿರ್ಣಯ (ಜಿಆರ್‌) ತಿಳಿಸಿದೆ.

ADVERTISEMENT

ಈ ಆರ್ಥಿಕ ನೆರವು ಸ್ಮಾರ್ಟ್‌ಫೋನ್‌ ಖರೀದಿಸಲು ಮಾತ್ರ ಸಂಬಂಧಿಸಿದೆ. ಚಾರ್ಜರ್‌, ಇಯರ್‌ಫೋನ್‌ ಮೊದಲಾದ ಬಿಡಿಭಾಗಗಳಿಗಾಗಿ ಅರ್ಜಿ ಸಲ್ಲಿಸುವಂತಿಲ್ಲ ಎಂದು ಪ್ರಕಟಣೆ ಹೇಳಿದೆ.

ಅರ್ಜಿಯನ್ನು ಅನುಮೋದಿಸಿದ ನಂತರ, ಫಲಾನುಭವಿ ರೈತರು ಸ್ಮಾರ್ಟ್‌ಫೋನ್‌ನ ಖರೀದಿ ಬಿಲ್‌ನ ಪ್ರತಿ, ಮೊಬೈಲ್ ಐಎಂಇಐ ಸಂಖ್ಯೆ ಇತ್ಯಾದಿಗಳನ್ನು ಒದಗಿಸಬೇಕಾಗುತ್ತದೆ ಎಂದು ಪ್ರಕಟಣೆ ಮಾಹಿತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.