ADVERTISEMENT

‘ದೆಹಲಿ ಚಲೊ’: ಕ್ರೀಡಾಂಗಣಗಳನ್ನು ತಾತ್ಕಾಲಿಕ ಜೈಲುಗಳಾಗಿ ಬಳಸಲು ನಿರಾಕರಣೆ

ಪಿಟಿಐ
Published 27 ನವೆಂಬರ್ 2020, 9:34 IST
Last Updated 27 ನವೆಂಬರ್ 2020, 9:34 IST
ಸಿಂಘು ಗಡಿ ಬಳಿ ‘ದೆಹಲಿ ಚಲೊ’ ಪ್ರತಿಭಟನಾ ಮೆರವಣಿಗೆಯನ್ನು ತಡೆಯಲು ಅಶ್ರುವಾಯು ಪ್ರಯೋಗಿಸಿದ ಪೊಲೀಸ್‌ ಪಡೆ    –ಪಿಟಿಐ ಚಿತ್ರ
ಸಿಂಘು ಗಡಿ ಬಳಿ ‘ದೆಹಲಿ ಚಲೊ’ ಪ್ರತಿಭಟನಾ ಮೆರವಣಿಗೆಯನ್ನು ತಡೆಯಲು ಅಶ್ರುವಾಯು ಪ್ರಯೋಗಿಸಿದ ಪೊಲೀಸ್‌ ಪಡೆ    –ಪಿಟಿಐ ಚಿತ್ರ   

ನವದೆಹಲಿ: ಪಂಜಾಬ್‌ ರೈತರು ಆರಂಭಿಸಿರುವ ‘ದೆಹಲಿ ಚಲೊ’ ಪ್ರತಿಭಟನಾ ಮೆರವಣಿಗೆಯು ದೆಹಲಿಯತ್ತ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಒಂಬತ್ತು ಕ್ರೀಡಾಂಗಣಗಳನ್ನು ತಾತ್ಕಾಲಿಕ ಜೈಲುಗಳಾಗಿ ಬಳಸಲು ದೆಹಲಿ ಪೊಲೀಸರು ಅನುಮತಿ ಕೋರಿದ್ದರು. ಆದರೆ ದೆಹಲಿ ಸರ್ಕಾರ ಅನುಮತಿಯನ್ನು ನಿರಾಕರಿಸಿದೆ.

‘ಈ ಪ್ರತಿಭಟನೆ ಅಹಿಂಸಾತ್ಮಕವಾಗಿದೆ. ಅಹಿಂಸಾತ್ಮಕ ಪ್ರತಿಭಟನೆ ಪ್ರತಿಯೊಬ್ಬ ಭಾರತೀಯನ ಹಕ್ಕು. ಆದ್ದರಿಂದ ರೈತರನ್ನು ಜೈಲಿನಲ್ಲಿಡಲು ಸಾಧ್ಯವಿಲ್ಲ. ದೆಹಲಿ ಸರ್ಕಾರವು ದೆಹಲಿ ಪೊಲೀಸರ ಮನವಿಯನ್ನು ನಿರಾಕರಿಸಿದೆ’ ಎಂದು ದೆಹಲಿ ಗೃಹ ಸಚಿವ ಸತ್ಯೇಂದ್ರ ಜೈನ್‌ ಅವರು ಹೇಳಿದರು.

ರೈತರ ಬೇಡಿಕೆಗಳು ನ್ಯಾಯಸಮ್ಮತವಾಗಿವೆ. ರೈತರನ್ನು ಜೈಲಿನಲ್ಲಿಡುವುದು ಸಮಸ್ಯೆಗೆ ಪರಿಹಾರವಲ್ಲ. ಅವರ ಬೇಡಿಕೆಗಳನ್ನು ಕೇಂದ್ರ ಸರ್ಕಾರ ಅಂಗೀಕರಿಸಬೇಕು ಎಂದು ಸತ್ಯೇಂದ್ರ ಜೈನ್‌ ಅವರು ಗೃಹ ಕಾರ್ಯದರ್ಶಿಗೆ ಬರೆದಿರುವ ಪತ್ರದಲ್ಲಿ ಹೇಳಿದ್ಧಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.