ADVERTISEMENT

ರೈತ ಸಂಘಟನೆಗಳ 13 ಪ್ರತಿನಿಧಿಗಳ ಜತೆ ನಡೆಸಿದ ಅಮಿತ್‌ ಶಾ ಸಭೆ ವಿಫಲ

ಪಿಟಿಐ
Published 8 ಡಿಸೆಂಬರ್ 2020, 19:52 IST
Last Updated 8 ಡಿಸೆಂಬರ್ 2020, 19:52 IST
ಅಮಿತ್‌ ಶಾ
ಅಮಿತ್‌ ಶಾ   

ನವದೆಹಲಿ: ರೈತ ಸಂಘಟನೆಗಳ 13 ಪ್ರತಿನಿಧಿಗಳ ಜತೆಗೆ ಅಮಿತ್‌ ಶಾ ಅವರು ಮಂಗಳವಾರ ರಾತ್ರಿ 8.30ರ ಹೊತ್ತಿಗೆ ನಡೆಸಿದ ‘ಅನೌಪಚಾರಿಕ ಮಾತುಕತೆ’ ವಿಫಲವಾಗಿದೆ. ‘ಕಾಯ್ದೆಗಳಿಗೆ ಮಾಡಬಹುದಾದ ತಿದ್ದುಪಡಿಗಳ ಬಗ್ಗೆ ಲಿಖಿತ ಭರವಸೆ ಕೊಡಲಾಗುವುದು ಎಂದು ಶಾ ಅವರು ಹೇಳಿದ್ದಾರೆ. ಆದರೆ, ಕಾಯ್ದೆಗಳನ್ನು ರದ್ದು ಮಾಡಬೇಕು ಎಂಬುದು ನಮ್ಮ ಬೇಡಿಕೆ. ಅದರಲ್ಲಿ ಯಾವುದೇ ರಾಜಿ ಇಲ್ಲ’ ಎಂದು ರೈತ ಮುಖಂಡ ಹನ್ನನ್‌ ಮೊಲ್ಲಾ ಸಭೆಯ ಬಳಿಕ ಹೇಳಿದ್ದಾರೆ.

ಸರ್ಕಾರದ ಜತೆಗೆ ಮುಂದಿನ ಹಂತದ ಮಾತುಕತೆಯ ಬಗ್ಗೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌ ನೇತೃತ್ವದ ಸಚಿವರ ಸಮಿತಿಯ ಜತೆಗೆ ಬುಧವಾರಕ್ಕೆ ಮಾತುಕತೆ ನಿಗದಿ ಆಗಿತ್ತು. ಈ ಮಾತುಕತೆ ನಿಗದಿಯಂತೆ ನಡೆಯಲಿದೆಯೇ ಎಂಬುದು ಸ್ಪಷ್ಟವಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT