ADVERTISEMENT

‘ಅಮೂಲ್ಯ’ ಯುದ್ಧನೌಕೆ ಸೇರ್ಪಡೆ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2025, 15:58 IST
Last Updated 19 ಡಿಸೆಂಬರ್ 2025, 15:58 IST
ಸೇನೆಯ ಅಧಿಕಾರಿಗಳು ಅಮೂಲ್ಯ ಯುದ್ಧನೌಕೆಯನ್ನು ಕರಾವಳಿ ಪಡೆಗೆ ಸೇರ್ಪಡೆಗೊಳಿಸಿದರು – ಪಿಟಿಐ ಚಿತ್ರ
ಸೇನೆಯ ಅಧಿಕಾರಿಗಳು ಅಮೂಲ್ಯ ಯುದ್ಧನೌಕೆಯನ್ನು ಕರಾವಳಿ ಪಡೆಗೆ ಸೇರ್ಪಡೆಗೊಳಿಸಿದರು – ಪಿಟಿಐ ಚಿತ್ರ   

ನವದೆಹಲಿ: ಆಧುನಿಕ ಅದಮ್ಯ ಯುದ್ಧನೌಕೆ ಸರಣಿಯ ಮೂರನೇ ಯುದ್ಧನೌಕೆ ‘ಅಮೂಲ್ಯ’ ಭಾರತೀಯ ಕರಾವಳಿ ಪಡೆಗೆ ಸೇರ್ಪಡೆಗೊಂಡಿದೆ.

ಈ ಯುದ್ಧನೌಕೆಯು ಕಣ್ಗಾವಲು, ಶೋಧ, ಕಳ್ಳಸಾಗಣೆ ವಿರುದ್ಧದ ಕಾರ್ಯಾಚರಣೆಯನ್ನು ಸಮರ್ಥವಾಗಿ ನಿರ್ವಹಿಸುತ್ತದೆ. ಈ ಮೂಲಕ ಪೂರ್ವ ಸಮುದ್ರದಲ್ಲಿ ಭಾರತೀಯ ಕರಾವಳಿ ಪಡೆಯ ಬಲವನ್ನು ಹೆಚ್ಚಿಸಲಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

‘ವೇಗದ ಪೆಟ್ರೊಲ್ ನೌಕೆಯು 51 ಮೀಟರ್‌ ಉದ್ಧವಿದ್ದು, ಇದನ್ನು ಗೋವಾ ಶಿಪ್‌ಯಾರ್ಡ್‌ ಲಿಮಿಟೆಡ್‌ ನಿರ್ಮಿಸಿದೆ. ಇದರ ಶೇ 60ರಷ್ಟು ಬಿಡಿಭಾಗಗಳು ದೇಶಿನಿರ್ಮಿತವಾದವು’ ಎಂದು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.