ADVERTISEMENT

ಅಮೆರಿಕದಲ್ಲಿ ‍ಪೊಲೀಸ್ ವಾಹನ ಡಿಕ್ಕಿ ಹೊಡೆದು ಮೃತಪಟ್ಟಿದ್ದ ಜಾಹ್ನವಿ ತಂದೆ ಸಾವು

ಪಿಟಿಐ
Published 13 ಫೆಬ್ರುವರಿ 2026, 15:31 IST
Last Updated 13 ಫೆಬ್ರುವರಿ 2026, 15:31 IST
 ಜಾಹ್ನವಿ ಕಂದುಲಾ
 ಜಾಹ್ನವಿ ಕಂದುಲಾ   

ಅದೋನಿ : ಅಮೆರಿಕದ ಸಿಯಾಟಲ್‌ನಲ್ಲಿ, ಪೊಲೀಸರ ವಾಹನ ಡಿಕ್ಕಿ ಹೊಡೆದು ಸಾವಿಗೀಡಾಗಿದ್ದ ಭಾರತೀಯ ವಿದ್ಯಾರ್ಥಿನಿ ಜಾಹ್ನವಿ ಕಂದುಲಾ (23) ಅವರ ತಂದೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. 

ಜಾಹ್ನವಿ ಕುಟುಂಬಕ್ಕೆ ಸಿಯಾಟಲ್‌ನ ಸ್ಥಳೀಯ ಆಡಳಿತವು 29 ದಶಲಕ್ಷ ಡಾಲರ್‌ (₹262 ಕೋಟಿ) ಪರಿಹಾರ ಘೋಷಿಸುವ ಎರಡು ದಿನಗಳ ಮುನ್ನ ಈ ಘಟನೆ ನಡೆದಿದೆ. ಜಾಹ್ನವಿ ತಂದೆ, ನಿವೃತ್ತ ಪೊಲೀಸ್‌ ಕಾನ್‌ಸ್ಟೆಬಲ್‌ ಶ್ರೀಕಾಂತ ಅವರು ಆಂಧ್ರ ಪ್ರದೇಶದ ಕರ್ನೂಲಿನಲ್ಲಿ ಫೆ.10ರಂದು ಸಾವಿಗೀಡಾಗಿದ್ದಾರೆ. 

ಜಾಹ್ನವಿ ಸಿಯಾಟಲ್‌ನ ನಾರ್ಥ್‌ ಈಸ್ಟರ್ನ್‌ ವಿಶ್ವವಿದ್ಯಾಲಯದಲ್ಲಿ ಇನ್‌‍ಫಾರ್ಮೇಷನ್‌ ಸಿಸ್ಟ್ಸ್ಂನಲ್ಲಿ (ಐಎಸ್‌) ಸ್ನಾತಕೋತ್ತರ ಪದವಿ ಅಧ್ಯಯನ ಮಾಡುತ್ತಿದ್ದರು. ರಸ್ತೆ ದಾಟುತ್ತಿದ್ದ ವೇಳೆ, ಪೊಲೀಸ್‌ ಅಧಿಕಾರಿ ಕೆವಿನ್‌ ಡೇವ್‌ ಅವರ ವಾಹನ ಡಿಕ್ಕಿಯಾಗಿ ಅವರು 2023ರಲ್ಲಿ ಸಾವಿಗೀಡಾಗಿದ್ದರು. 

ADVERTISEMENT

ಗಂಟೆಗೆ 40 ಕಿ.ಮೀ. ವೇಗದಲ್ಲಿ ಚಲಿಸಬೇಕಿದ್ದ ವಲಯದಲ್ಲಿ 119 ಕಿ.ಮೀ. ವೇಗದಲ್ಲಿ ವಾಹನ ಚಲಾಯಿಸಿದ್ದರಿಂದ ಅಪಘಾತ ಸಂಭವಿಸಿತ್ತು. ಮಾದಕವಸ್ತು ಸಂಬಂಧಿಸಿದ ತುರ್ತು ಕರೆಗೆ ಸ್ಪಂದಿಸಲು ಪೊಲೀಸ್‌ ಅಧಿಕಾರಿ ಧಾವಿಸುತ್ತಿದ್ದಾಗ ದುರ್ಘಟನೆ ನಡೆದಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.