ಡೆಹ್ರಾಡೂನ್: ‘ಪ್ರತೀಕೂಲ ಹವಾಮಾನ ಪರಿಸ್ಥಿತಿ, ವಲಯ ಆಧಾರಿತ ತರಬೇತಿಯಲ್ಲಿ ಪೈಲಟ್‌ಗಳಿಗೆ ಇರುವ ನೈಪುಣ್ಯದ ಕೊರತೆ ಹಾಗೂ ವಾಯುಯಾನ ಮೂಲಸೌಕರ್ಯ ಕೊರತೆಗಳಿಂದಾಗಿ ಚಾರ್‌ಧಾಮ್ ಪ್ರದೇಶದಲ್ಲಿ ವೈಮಾನಿಕ ಅಪಘಾತಗಳು ಹೆಚ್ಚಾಗಿವೆ’ ಎಂದು ಹಿರಿಯ ಪೈಲಟ್ ಒಬ್ಬರು ತಿಳಿಸಿದ್ದಾರೆ.
ಗೌರಿಕುಂಡ ಅರಣ್ಯ ಪ್ರದೇಶದಲ್ಲಿ ಖಾಸಗಿ ಸಂಸ್ಥೆಯ ಕಾಪ್ಟರ್ ಭಾನುವಾರ ಪತನಗೊಂಡು 7 ಮಂದಿ ಮೃತಪಟ್ಟಿದ್ದರು. ಈ ವರ್ಷ ಚಾರ್‌ಧಾಮ್ ಯಾತ್ರೆ ಆರಂಭವಾದಾಗಿನಿಂದ (ಏಪ್ರಿಲ್ 30) ಇದು 5ನೇ ವೈಮಾನಿಕ ಅವಘಡವಾಗಿದ್ದು, ಈ ಬಗ್ಗೆ ತೀವ್ರ ಚರ್ಚೆ ಶುರುವಾಗಿದೆ.
ಹದಿನೈದು ವರ್ಷಗಳಿಂದ ವೈಮಾನಿಕ ಕ್ಷೇತ್ರದಲ್ಲಿರುವ, ಮೊದಲಿಗೆ ಸೇನೆಯ ವಾಯು ವಿಭಾಗದಲ್ಲಿ ಕಾರ್ಯನಿರ್ವಹಿಸಿ, ಬಳಿಕ ಖಾಸಗಿ ಹೆಲಿಕಾಪ್ಟರ್ ಸಂಸ್ಥೆಯಲ್ಲಿ ಪೈಲಟ್ ಆಗಿದ್ದ ಹಿರಿಯ ಪೈಲಟ್ ಒಬ್ಬರು ಅವಘಡಗಳಿಗೆ ಕಾರಣಗಳನ್ನು ಪಟ್ಟಿ ಮಾಡಿದ್ದಾರೆ. ಜತೆಗೆ ಚಾರ್‌ಧಾಮ್ ಪ್ರದೇಶಗಳಲ್ಲಿ ಹೆಲಿಕಾಪ್ಟರ್ ಕಾರ್ಯಾಚರಣೆಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ನೀಡಿರುವ ಸೂಚನೆ, ಶಿಷ್ಟಾಚಾರವನ್ನು ಪರಿಷ್ಕರಿಸಬೇಕೆಂದು ಸಲಹೆ ನೀಡಿದ್ದಾರೆ.
ಕಾಪ್ಟರ್‌ಗಳ ಮೇಲ್ವಿಚಾರಣೆಗೆ ಕೇಂದ್ರೀಕೃತ ಪ್ರಾಧಿಕಾರ ಇಲ್ಲ ಎತ್ತರ ಪ್ರದೇಶ ಕಿರಿದಾದ ಕಣಿವೆ ಬದಲಾಗುವ ಹವಾಮಾನ ಅನುಭವಿ ಪೈಲಟ್‌ಗಳಿಗೂ ವಲಯ ಆಧಾರಿತ ತರಬೇತಿ ಕೊರತೆ ಖಾಸಗಿ ಕಾಪ್ಟರ್‌ಗಳಲ್ಲಿನ ಪೈಲಟ್‌ಗಳಿಗಿರುವ ಹೆಚ್ಚಿನ ಒತ್ತಡ ವಲಯ ಆಧಾರಿತ ತರಬೇತಿ ವೇಳೆ ಹಲವು ಸವಾಲುಗಳ ನಿರ್ಲಕ್ಷ್ಯ
ಡೆಹ್ರಾಡೂನ್: ಕೇದಾರನಾಥದಿಂದ ಗುಪ್ತಕಾಶಿಗೆ ಸಾಗುತ್ತಿದ್ದ ಹೆಲಿಕಾಪ್ಟರ್ ಪತನಕ್ಕೆ ಸಂಬಂಧಿಸಿದಂತೆ ಕಾಪ್ಟರ್‌ನ ನಿರ್ವಹಣಾ ಸಂಸ್ಥೆಯಾಗಿರುವ ‘ಆರ್ಯನ್ ಏವಿಯೇಷನ್ ಪ್ರೈವೇಟ್ ಲಿಮಿಟೆಡ್’ನ ಇಬ್ಬರು ಹಿರಿಯ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
‘ಜೂ.15ರಂದು ಆರ್ಯನ್ ಏವಿಯೇಷನ್ ಕಾಪ್ಟರ್‌ನ ಮೊದಲ ಪ್ರಯಾಣಕ್ಕೆ ಬೆಳಿಗ್ಗೆ 6ರಿಂದ 7 ಗಂಟೆಯ ಅವಧಿ ನಿಗದಿಪಡಿಸಲಾಗಿತ್ತು. ಆದರೆ ಸಂಸ್ಥೆ ಮುಂಚೆಯೇ ಕಾರ್ಯಾಚರಣೆ ನಡೆಸಿದ್ದು 5.30ಕ್ಕೆ ಕಾಪ್ಟರ್ ಪತನಗೊಂಡಿದೆ. ಸಂಸ್ಥೆ ಈ ನಿರ್ಲಕ್ಷ್ಯ ತೋರಿದ್ದರಿಂದ ಅವಘಡ ಸಂಭವಿಸಿದೆ‘ ಎಂದು ಆರೋಪಿಸಿ ಸಬ್ ಇನ್‌ಸ್ಪೆಕ್ಟರ್ ರಾಜೀವ್ ನಖೋಲಿಯಾ ಎಂಬವರು ದೂರು ಸಲ್ಲಿಸಿದ್ದರು. ಈ ದೂರನ್ನು ಆಧರಿಸಿ ಸಂಸ್ಥೆಯ ಹೊಣೆಗಾರಿಕಾ ವ್ಯವಸ್ಥಾಪಕ ಕೌಶಿಕ್ ಪಾಠಕ್ ಹಾಗೂ ವ್ಯವಸ್ಥಾಪಕ ವಿಕಾಸ್ ತೋಮರ್ ಅವರ ವಿರುದ್ಧ ಸೋನಪ್ರಯಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.