ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಉನ್ನತ ತಂತ್ರಜ್ಞಾನ, ಕೌಶಲ ಅಭಿವೃದ್ಧಿ ಮತ್ತು ಕೋವಿಡ್ ವಿರುದ್ಧ ಹೋರಾಟ ಕುರಿತಾಗಿ ಜಪಾನಿನ ಪ್ರಧಾನಿ ಯೋಶಿಹಿದೆ ಸುಗಾ ಅವರೊಂದಿಗೆ ಸೋಮವಾರ ಚರ್ಚಿಸಿದರು.
ದ್ವಿಪಕ್ಷೀಯ ಕ್ರಮಗಳ ಪ್ರಗತಿ ಬಗ್ಗೆ ಉಭಯ ನಾಯಕರುಫೋನ್ ಕರೆಯ ಮೂಲಕ ಮಾತುಕತೆ ನಡೆಸಿದರು.
‘ಜಪಾನ್ ಪ್ರಧಾನಿಯೊಂದಿಗೆ ಫೋನ್ ಕರೆಯ ಮೂಲಕ ಮಾತನಾಡಿದೆ. ಈ ವೇಳೆ ದ್ವಿಪಕ್ಷೀಯ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದೆವು. ಉನ್ನತ ತಂತ್ರಜ್ಞಾನ , ಕೌಶಲ ಅಭಿವೃದ್ಧಿ, ಕೋವಿಡ್ ಸಾಂಕ್ರಾಮಿಕವನ್ನು ಜತೆಯಾಗಿ ಹೋರಾಡುವ ಬಗ್ಗೆಯೂ ಚರ್ಚೆ ನಡೆಸಿದ್ದೇವೆ’ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.