ಮಂಗಳೂರು ದುರಂತ ಸೇರಿದಂತೆ ಪ್ರಮುಖ ವಿಮಾನ ಅಪಘಾತಗಳು
ಅಮರೆಲಿ: ಮೃತ ಹೆಂಡತಿಯ ಅಸ್ತಿಯನ್ನು ಆಕೆಯ ಇಚ್ಛೆಯಂತೆಯೇ ನರ್ಮದಾ ನದಿಯಲ್ಲಿ ವಿಸರ್ಜಿಸಲು ಬಂದಿದ್ದ ಅರ್ಜುನ್ ಪಟೋಲಿಯಾ ಅವರು ವಿಮಾನ ದುರಂತದಲ್ಲಿ ಸುಟ್ಟು ಬೂದಿಯಾದ ಕರುಣಾಜನಕ ಘಟನೆ ನಡೆದಿದೆ. ದಂಪತಿಯ 4 ಮತ್ತು 8 ವರ್ಷದ ಹೆಣ್ಣುಮಕ್ಕಳು ಈಗ ಅನಾಥರಾಗಿದ್ದಾರೆ.
‘ಅನಾರೋಗ್ಯದ ಕಾರಣ ಎರಡು ವಾರಗಳ ಹಿಂದಷ್ಟೇ ಅರ್ಜುನ್ ಅವರ ಪತ್ನಿ ಭಾರತಿ ಅವರು ಲಂಡನ್‌ನಲ್ಲಿ ಮೃತಪಟ್ಟಿದ್ದರು. 36 ವರ್ಷದ ಅರ್ಜುನ್, ಅಮರೇಲಿ ಜಿಲ್ಲೆಯವರು. ಹಲವು ವರ್ಷಗಳಿಂದ ಅರ್ಜುನ್ ಅವರು ಲಂಡನ್‌ನಲ್ಲಿ ವಾಸವಿದ್ದರು. ಸದ್ಯ ಇಬ್ಬರು ಮಕ್ಕಳು ಲಂಡನ್‌ನಲ್ಲಿ ಹತ್ತಿರದ ಸಂಬಂಧಿಕರ ಮನೆಯಲ್ಲಿದ್ದಾರೆ’ ಎಂದು ಅರ್ಜುನ್ ಅವರ ಸಹೋದರ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.