ADVERTISEMENT

ಬಿಹಾರ ಚುನಾವಣೆ | ಮೊದಲ ಹಂತದಲ್ಲಿ ಶೇ 65.08 ಮತದಾನ: ಚುನಾವಣಾ ಆಯೋಗ

ಪಿಟಿಐ
Published 8 ನವೆಂಬರ್ 2025, 14:00 IST
Last Updated 8 ನವೆಂಬರ್ 2025, 14:00 IST
ಚುನಾವಣಾ ಆಯೋಗ
ಚುನಾವಣಾ ಆಯೋಗ   

ಪಟ್ನಾ: ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದಲ್ಲಿ ಶೇಕಡ 65.08ರಷ್ಟು ಮತದಾನ ಆಗಿದ್ದು, ಇದು ರಾಜ್ಯದ ಇತಿಹಾಸದಲ್ಲಿಯೇ ಅತ್ಯಧಿಕವಾಗಿದೆ ಎಂದು ಕೇಂದ್ರ ಚುನಾವಣಾ ಆಯೋಗ ತಿಳಿಸಿದೆ.

ಮೊದಲ ಹಂತದ ಮತದಾನ ನ.6ರಂದು ನಡೆದಿದ್ದು, ಮತದಾನದ ಪ್ರಮಾಣಕ್ಕೆ ಸಂಬಂಧಿಸಿದ ಅಂತಿಮ ಅಂಕಿ–ಅಂಶವನ್ನು ಬಿಹಾರದ ಮುಖ್ಯ ಚುನಾವಣಾ ಅಧಿಕಾರಿಯ ಕಚೇರಿ ಶನಿವಾರ ಬಿಡುಗಡೆ ಮಾಡಿದೆ.

2020ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮತದಾನದ ಒಟ್ಟು ಪ್ರಮಾಣ ಶೇ 57.29 ಆಗಿತ್ತು. ಅದಕ್ಕೆ ಹೋಲಿಸಿದರೆ, ಮತದಾನದ ಪ್ರಮಾಣ ಶೇ 7.79ರಷ್ಟು ಹೆಚ್ಚಾಗಿದೆ. 

ADVERTISEMENT

ಮುಜಫ್ಫರ್‌ಪುರದಲ್ಲಿ ಅತಿಹೆಚ್ಚು ಅಂದರೆ ಶೇ 71.81 ಮತದಾನ ನಡೆದಿದೆ. ಸಮಸ್ತಿಪುರದಲ್ಲಿ ಶೇ 71.74 ಮತದಾನ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.