ADVERTISEMENT

ಅಹಮದಾಬಾದ್: ಮಾಸ್ಕ್‌ ಧರಿಸದವರಿಗೆ ₹ 500 ದಂಡ

ಪಿಟಿಐ
Published 13 ಜುಲೈ 2020, 12:31 IST
Last Updated 13 ಜುಲೈ 2020, 12:31 IST
ಮಾಸ್ಕ್‌
ಮಾಸ್ಕ್‌   

ಅಹಮದಾಬಾದ್:ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಅಹಮದಾಬಾದ್‌ನಲ್ಲಿ ನಿರ್ಬಂಧಗಳನ್ನು ಕಠಿಣಗೊಳಿಸಲಾಗಿದ್ದು, ಮುಖಗವಸು ಧರಿಸದೆಯೇ ಸಾರ್ವಜನಿಕ ಪ್ರದೇಶಗಳಲ್ಲಿ ಅಡ್ಡಾಡುವವರಿಗೆ ವಿಧಿಸುವ ದಂಡದ ಮೊತ್ತವನ್ನು ₹ 500ಕ್ಕೆ ಏರಿಸಲಾಗಿದೆ.

ಮಾಸ್ಕ್ ಧರಿಸದವರಿಗೆ ಈ ಹಿಂದೆ ₹ 200 ದಂಡ ವಿಧಿಸಲಾಗುತ್ತಿತ್ತು.ನಗರದ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ ಧರಿಸದೆ ನಿಯಮ ಉಲ್ಲಂಘಿಸುವವರ ಸಂಖ್ಯೆ ಅಧಿಕವಾಗಿರುವುದರಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದುಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೀವ್ ಗುಪ್ತಾ ತಿಳಿಸಿದ್ಧಾರೆ. ಅವರನ್ನು ನಗರದ ಕೋವಿಡ್‌–19 ಸ್ಥಿತಿಗತಿ ಪರಿಶೀಲನೆಯ ಮೇಲ್ವಿಚಾರಕರಾಗಿ ನೇಮಿಸಲಾಗಿದೆ.

ಈವರೆಗೆ ನಗರದಲ್ಲಿ ಮಾಸ್ಕ್‌ ಧರಿಸಿದ 1.72 ಲಕ್ಷ ಜನರಿಗೆ ದಂಡ ವಿಧಿಸಲಾಗಿದೆ. ಅಂತರ ಕಾಯ್ದುಕೊಳ್ಳದಿರುವ ಮತ್ತು ಇತರ ನಿಯಮಗಳನ್ನು ಪಾಲಿಸದ 94 ಮಳಿಗೆಗಳನ್ನು ಜಪ್ತಿ ಮಾಡಲಾಗಿದೆ ಎಂದು ಗುಪ್ತಾ ಮಾಹಿತಿ ನೀಡಿದರು.

ADVERTISEMENT

ಪಾನ್‌ ಅಂಗಡಿಗಳ ಬಳಿಯೇ ಗ್ರಾಹಕರು ಉಗುಳಿದರೆ ಅಂಗಡಿಯ ಮಾಲೀಕರಿಗೆ ₹ 10 ಸಾವಿರ ದಂಡ ವಿಧಿಸಲಾಗುವುದು. ಅಹಮದಾಬಾದ್ ಮುನ್ಸಿಪಲ್ ಕಮಿಷನರ್ ಮುಖೇಶ್ ಕುಮಾರ್ ಮತ್ತು ಇತರ ಹಿರಿಯ ಅಧಿಕಾರಿಗಳೊಂದಿಗೆ ಸೋಮವಾರ ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.