ADVERTISEMENT

ಮಮತಾ ಕೌಟುಂಬಿಕ ಹಿನ್ನೆಲೆ ಬಗ್ಗೆ ಹೇಳಿಕೆ ವಿವಾದ: ದಿಲೀಪ್‌ ಘೋಷ್‌ ವಿರುದ್ಧ FIR

ಪಿಟಿಐ
Published 28 ಮಾರ್ಚ್ 2024, 9:30 IST
Last Updated 28 ಮಾರ್ಚ್ 2024, 9:30 IST
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಬಿಜೆಪಿ ಸಂಸದ ದಿಲೀಪ್‌ ಘೋಷ್‌
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಬಿಜೆಪಿ ಸಂಸದ ದಿಲೀಪ್‌ ಘೋಷ್‌   

ಕೋಲ್ಕತ್ತ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೌಟುಂಬಿಕ ಹಿನ್ನೆಲೆ ಅಣಕಿಸಿದ್ದಾರೆ ಎನ್ನುವ ಆರೋಪದ ಮೇಲೆ ಬಿಜೆಪಿ ನಾಯಕ ದಿಲೀಪ್‌ ಘೋಷ್‌ ವಿರುದ್ಧ ದುರ್ಗಾಪುರ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ದುರ್ಗಾಪುರ ನ್ಯಾಯಾಲಯದ ವಕೀಲ ಮತ್ತು ಇನ್ನೊಬ್ಬ ವ್ಯಕ್ತಿ ದೂರು ನೀಡಿದ ಹಿನ್ನೆಲೆ ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಐಪಿಸಿ ಸೆಕ್ಷನ್‌ 504ರ ಅಡಿ (ಶಾಂತಿಯನ್ನು ಕದಡಲು ಉದ್ದೇಶಪೂರ್ವಕವಾಗಿ ಅವಮಾನ) ಹಾಗೂ ಐಪಿಸಿ ಸೆಕ್ಷನ್‌ 509ರ ಅಡಿ (ಮಹಿಳೆಯ ನಮ್ರತೆಯನ್ನು ಅವಮಾನಿಸುವ ಉದ್ದೇಶದಿಂದ ಪದ ಬಳಕೆ) ‌ಎಫ್‌ಐಆರ್‌ ದಾಖಲಿಸಲಾಗಿದೆ.

ADVERTISEMENT

ಘೋಷ್‌ ಅವರಿಗೆ ಚುನಾವಣಾ ಆಯೋಗ ಕೂಡ ಶೋಕಾಸ್‌ ನೋಟಿಸ್‌ ಜಾರಿ ಮಾಡಿದ್ದು, ಪ್ರತಿಕ್ರಿಯಿಸಲು ಹೇಳಿದೆ. ಮಮತಾ ಬ್ಯಾನರ್ಜಿ ಅವರ ಕುಟುಂಬದ ಹಿನ್ನೆಲೆ ಬಗೆಗಿನ ಹೇಳಿಕೆ ವಿವಾದ ಸೃಷ್ಟಿಸಿದ ಬೆನ್ನಲ್ಲೇ ಬುಧವಾರ ಘೋಷ್‌ ಕ್ಷಮೆ ಯಾಚಿಸಿದ್ದರು.

ದಿಲೀಪ್‌ ಘೋಷ್‌ ಅವರು ಮಮತಾ ಬ್ಯಾನರ್ಜಿ ಅವರ ಕೌಟುಂಬಿಕ ಹಿನ್ನೆಲೆಯನ್ನು ಅಣಕಿಸಿದ್ದಾರೆ ಎನ್ನಲಾದ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದು, ಬಿಜೆಪಿ –ಟಿಎಂಸಿ ನಡುವೆ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ.

‘ಬಂಗಾಳವು ತನ್ನ ಮಗಳನ್ನು ಬಯಸುತ್ತದೆ’ ಎಂಬ ಟಿಎಂಸಿ ಘೋಷವಾಕ್ಯವನ್ನು ಘೋಷ್‌ ಅಣಕಿಸಿದ್ದರು. ‘ಮಮತಾ ಬ್ಯಾನರ್ಜಿ ಗೋವಾಗೆ ಹೋದಾಗ, ತಾನು ಗೋವಾದ ಮಗಳು ಎನ್ನುತ್ತಾರೆ. ತ್ರಿಪುರಾದಲ್ಲಿ ‘ತ್ರಿಪುರಾದ ಮಗಳು’ ಎನ್ನುತ್ತಾರೆ. ಮೊದಲು... ಸ್ಪಷ್ಟಪಡಿಸಲಿ’ ಎಂದು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.